Raichur | ತಾಯಿ ಫೋಟೋ ಕಿಂಡಲ್ – ತರಗತಿಯಲ್ಲಿ ಮಾರಾಮಾರಿ
ರಾಯಚೂರು : ತನ್ನ ತಾಯಿಯ ಫೋಟೋ ಬಗ್ಗೆ ಕಿಂಡಲ್ ಮಾಡಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಯೊರ್ವ ತನ್ನ ತರಗತಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರು ನಗರದ ನವೋದಯ ಕಾಲೇಜಿನಲ್ಲಿ ನಡೆದಿದೆ.
ರೋಹಿತ್ ಹಲ್ಲೆ ನಡೆಸಿರುವ ವಿದ್ಯಾರ್ಥಿಯಾಗಿದ್ದು, ಶಂಭುಲಿಂಗ ಹಾಗೂ ಶಂಕರ್ ಹಲ್ಲೆಗೆ ಒಳಗಾದವರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ರೋಹಿತ್ ತಾಯಿ ಹುಟ್ಟುಹಬ್ಬದ ಹಿನ್ನೆಲೆ ತನ್ನ ತಾಯಿ ಫೋಟೊ ಸ್ಟೇಟಸ್ ಹಾಕಿದ್ದ. ಆಗ ರೋಹಿತ್ ತಾಯಿ ಸ್ಟೇಟಸ್ ಡೌನ್ ಲೋಡ್ ಮಾಡಿದ್ದ ಶಂಭುಲಿಂಗ ಹಾಗೂ ಶಂಕರ್, ಆ ಬಗ್ಗೆ ಕಿಂಡಲ್ ಮಾಡಿದ್ದಾರೆ.
ಇದರಿಂದ ಕೋಪಗೊಂಡು ಕ್ಯಾಂಪಸ್ ನಲ್ಲಿನ ರಾಡ್ ತಂದ ರೋಹಿತ್ ಎಲ್ಲರ ಎದುರಲ್ಲಿಯೇ ಹಲ್ಲೆ ನಡಸಿದ್ದಾನೆ.
ಘಟನೆ ವೇಳೆ ಶಂಕರ್ ತಲೆಗೆ ಬಲವಾದ ಪೆಟ್ಟು ಬಿದ್ದಿದು, 12 ಸ್ಟಿಚಸ್ ಹಾಕಲಾಗಿದೆ. ಮತ್ತೋರ್ವ ಗಾಯಾಳು ಶಂಭುಲಿಂಗಗೂ ಗಂಭೀರವಾದ ಗಾಯಗಳಾಗಿವೆ.
ಸದ್ಯ ಇಬ್ಬರು ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.