Rajamouli: ರಾಜಮೌಳಿ ಜೊತೆ ನೆಟ್ ಫ್ಲಿಕ್ಸ್ ಭಾರಿ ಪ್ಲಾನ್?
ಬಾಹುಬಲಿ, ಬಾಹುಬಲಿ 2, ಆರ್ ಆರ್ ಆರ್ ಸಿನಿಮಾಗಳ ಮೂಲಕ ಇಡೀ ಸಿನಿಮಾ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಎಸ್ ಎಸ್ ರಾಜಮೌಳಿ.
ಇತ್ತೀಚೆಗೆ ತೆರೆಕಂಡ ಆರ್ ಆರ್ ಆರ್ ಸಿನಿಮಾ ಮೂಲಕ ರಾಜಮೌಳಿ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ.
ಈ ಸಿನಿಮಾ ಬಗ್ಗೆ ಹಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ರಾಜಮೌಳಿ ಹೆಸರು ಒಂದು ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ.
ಇದೀಗ ಹೊಸ ಸುದ್ದಿ ಏನಂದರೇ ಈ ಬ್ರಾಂಡ್ ಜೊತೆಗೆ ಒಂದು ಸಿರೀಸ್ ಅನ್ನು ತಯಾರಿಸಲು ಓಟಿಟಿ ದಿಗ್ಗಜ ನೆಟ್ ಫ್ಲಿಕ್ಸ್ ಪ್ಲಾನ್ ಮಾಡಿಕೊಂಡಿದೆ.
ಈ ಹಿಂದೆ, ನೆಟ್‌ಫ್ಲಿಕ್ಸ್ ‘ಬಾಹುಬಲಿ: ಬಿಫೋರ್ ದ ಬಿಗಿನಿಂಗ್’ ಹೆಸರಿನ ವೆಬ್ ಸರಣಿಯನ್ನು ಬಿಡುಗಡೆ ಮಾಡಿತ್ತು.

ಆದರೆ ಯೋಜನೆ ಜಾರಿಯಾಗಿರಲಿಲ್ಲ. ನಿರೀಕ್ಷೆಯಂತೆ ಚಿತ್ರೀಕರಣ ಆಗದ ಕಾರಣ ನೆಟ್‌ಫ್ಲಿಕ್ಸ್ ಯೋಜನೆಯನ್ನು ರದ್ದುಗೊಳಿಸಿತ್ತು.
‘RRR’ ಚಿತ್ರದ ಮೂಲಕ ಮತ್ತೊಮ್ಮೆ ರಾಜಮೌಳಿ ಹೆಸರು ವಿಶ್ವದಾದ್ಯಂತ ಕೇಳಿಬರುತ್ತಿದೆ.
ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್ ವೆಬ್ ಸರಣಿಗಾಗಿ ರಾಜಮೌಳಿ ಅವರನ್ನು ಸಂಪರ್ಕಿಸಿದೆಯಂತೆ.
ಆದ್ರೆ ಈ ಸುದ್ದಿಯನ್ನು ರಾಜಮೌಳಿ ತಂಡ ಮತ್ತು ನೆಟ್‌ಫ್ಲಿಕ್ಸ್ ಎರಡೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಅಂದಹಾಗೆ ಎಸ್ ಎಸ್ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆಗೆ ಇಂದು ಸಿನಿಮಾ ಮಾಡಲಿದ್ದಾರೆ. ಅದರ ತಯಾರಿಯಲ್ಲಿ ಜಕ್ಕಣ್ಣ ಅಂಡ್ ಟೀಂ ಕೆಲಸ ಮಾಡುತ್ತಿದೆ.