Crime : ಯೂಟ್ಯೂಬ್ ಸ್ಟಾರ್ ಮಾಡುವ ಆಸೆ ತೋರಿಸಿ ಅತ್ಯಾಚಾರ….
ಜೈಪುರ: 16 ವರ್ಷದ ಹುಡುಗಿಯನ್ನ ಯೂಟ್ಯೂಬ್ ಸ್ಟಾರ್ ಮಾಡುವುದಾಗಿ ಆಮಿಷವೊಡ್ಡಿ ಆಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ..
ಸುಮಾರು 3-4 ವರ್ಷಗಳಿಂದ ಯೂಟ್ಯೂಬ್‍ನಲ್ಲಿ ಫನ್ನಿ ವೀಡಿಯೋ ಮಾಡುತ್ತಿದ್ದ 16 ವರ್ಷದ ಹುಡುಗಿಗೆ ಒಂದು ತಿಂಗಳ ಹಿಂದೆ ಜೋಧ್‍ಪುರದ ಬಾಬ್ರಾದ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ರಾಜ್ ಖಾನ್ ಬಾತನ ಪರಿಚಯವಾಗಿತ್ತು. ಆತ ಹುಡುಗಿಯನ್ನ ಟಾಪ್ ಯೂಟ್ಯೂಬ್ ಸ್ಟಾರ್ ಮಾಡಿ ಹಣ ಸಂಪಾದಿಸಲು ನೆರವಾಗುವುದಾಗಿ ಪುಸಲಾಯಿಸಿ ಜನವರಿ 8ರಂದು ವೀಡಿಯೋ ಮಾಡುವ ನೆಪದಲ್ಲಿ ಜೋಧ್‍ಪುರದ ಫ್ಲಾಟ್‍ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಈ ಘಟನೆ ಕುರಿತಂತೆ ಮನೆಯವರಿಗೆ ತಿಳಿಸಿದ ನಂತರ ಹುಡುಗಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಕೆಲವು ದಿನಗಳಿಂದ ಹೆದರಿ ಮೌನವಾಗಿದ್ದ ಸಂತ್ರಸ್ತ ಹುಡುಗಿ ಇದೀಗ ಈ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದು, ಬಾಲಕಿಯ ಪೋಷಕರು ಈ ಬಗ್ಗೆ ಪೊಲೀಸರುಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜನವರಿ 28ರಂದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ..








