Rajasthan – ಗಾಯಗೊಂಡ ಚಿರತೆಯೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡ ಮಹಿಳೆ
ಗಾಯಗೊಂಡು ನರಳುತ್ತಿದ್ದ ಚಿರತೆಗೆ ಮಹಿಳೆಯೊಬ್ಬಳು ಸಹಾನುಭೂತಿಯಿಂದ ರಾಖಿ ಕಟ್ಟಿರುವ ಘಟನೆ ರಾಜಸ್ಥಾನದ ರಾಜಸಮಂದ್‌ನ ದಿಯೋಗರ್ ತೆಹಸಿಲ್ ನಲ್ಲಿ ನಡೆದಿದೆ. ಮಹಿಳೆ ಚಿರತೆಗೆ ರಾಕಿ ಕಟ್ಟಿರುವ ದೃಶ್ಯ ವೈರಲ್ ಆಗಿದೆ.
ಸುಮಾರು ಮೂರು ವರ್ಷದ ಚಿರತೆಯೊಂದು ದಿಯೋಗರ್ ತೆಹಸಿಲ್ ಬಳಿ ಗಾಯಗೊಂಡಿರುವ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿದೆ. ಸಿಬ್ಬಂದಿಗಳು ಅಲ್ಲಿಗೆ ಬರುವಷ್ಟರಲ್ಲಿ ಮಂದಿ ಜಮಾಯಿಸಿ ಗಾಯಗೊಂಡ ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ ಕಿರುಕುಳ ನೀಡಿದ್ದಾರೆ.
ಅಷ್ಟರಲ್ಲಿ ಆ ಮಾರ್ಗದಲ್ಲಿ ಹೊರಡುತ್ತಿದ್ದ ಸ್ಥಳೀಯ ನಿವಾಸಿ ಲೀಲಾ ಕನ್ವರ್ ನಾರಾಣ ಅವರು ಜನಜಂಗುಳಿಯಿಂದ ಸುತ್ತುವರೆದಿದ್ದ ಚಿರತೆಯನ್ನ ನೋಡಿದ್ದಾರೆ. ಚಿರತೆಯಿಂದ ದೂರವಿರಲು ಜನರನ್ನ ಕೇಳಿ ಕೆಲವು ನಿಮಿಷಗಳ ಕಾಲ ಅದರ ಪಕ್ಕದಲ್ಲೇ ಕುಳಿತಿದ್ದಾರೆ.
ಚಿರತೆಯ ಅವಸ್ಥೆಯನ್ನ ಕಂಡು ಭಾವುಕಳಾದ ಆಕೆ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಚಿರತೆ ಪಂಜಕ್ಕೆ (ಕೈ) ರಾಖಿ ಕಟ್ಟಿದ್ದಾಳೆ. ಚಿರತೆ ಕೂಡ ಮೌನವಾಗಿ ಕುಳಿತಿತ್ತು. ಮಹಿಳೆಯ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಅಲ್ಲಿದ್ದ ಗ್ರಾಮಸ್ಥರು ಚಿರತೆ ಇರುವ ಬಗ್ಗೆ ಕುನ್ವಾತಲ್ (ರಾಜಸಮಂದ್) ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
An Amazing RakshaBandhan celebration with Leopard.. 🎉🎊🤘🏻
But sadly, Dr. Couldn't save her. 😔#Amazing #Rakhi #RakshaBandhan #2022 #Kankroli #Rajsamand # Rajasthan #India #Leopard #Women #Mewad #Braves #Celebration #Memorable pic.twitter.com/n1uvX6GB1k
— Pankkaj Paliwal 🇮🇳 (@imPankkaj) August 13, 2022
ಪೊಲೀಸರು ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಗಾಯಗೊಂಡ ಚಿರತೆಯನ್ನು ರಾಜಸಮಂದ್ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆದರೆ ತೀವ್ರ ಗಾಯಗೊಂಡಿದ್ದ ಚಿರತೆಯ ಜೀವವನ್ನ ಉಳಿಸಲು ಸಾಧ್ಯವಾಗಲಿಲ್ಲ. ಚಿರತೆಯ ವಯಸ್ಸು ಎರಡುವರೇಯಿಂದ ಮೂರುವರೇ ವರ್ಷ ರಬಹುದು ಎಂದು ಅರಣ್ಯ ಇಲಾಖೆಯ ಎಸಿಎಫ್ ವಿನೋದ್ ಕುಮಾರ್ ರೈ ತಿಳಿಸಿದ್ದಾರೆ.
Rajasthan: Rajsamand woman ties rakhi to injured leopard, video goes viral