ಪುನೀತ್ ನಿಧನಕ್ಕೆ ರಜನಿ ಸಂತಾಪ… ತಲೈವಾ ವಿರುದ್ಧ ಕಿಡಿ ಕಾರಿದ ನೆಟ್ಟಿಗರು..!

1 min read
Rajinikath

ಪುನೀತ್ ನಿಧನಕ್ಕೆ ರಜನಿ ಸಂತಾಪ… ತಲೈವಾ ವಿರುದ್ಧ ಕಿಡಿ ಕಾರಿದ ನೆಟ್ಟಿಗರು..!

ಸೂಪರ್ ಸ್ಟಾರ್ ರಜನಿ ಕಾಂತ್ ಮತ್ತು ಅಣ್ಣಾವ್ರ ಕುಟುಂಬದ ಜೊತೆಗೆ ಅವಿನಾಭಾವ ಸಂಬಂಧವಿದೆ.

ಪುನೀತ್ ನಿಧನದ ವೇಳೆ ಅನಾರೋಗ್ಯದ ಕಾರಣ ರಜನಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಅಪ್ಪು ನಿಧನವಾಗಿ 13 ದಿನಗಳ ನಂತರ ರಜನಿಕಾಂತ್ ಅವರು ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಪ್ಪು ನನ್ನ ಕಣ್ಣುಗಳ ಮುಂದೆ ಬೆಳೆದ ಹುಡುಗ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಇಹಲೋಕ ತ್ಯಜಿಸಿದ್ದಾರೆ.

ಅಪ್ಪು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪುನೀತ್ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅಷ್ಟೇ ಅಲ್ಲ ಪುನೀತ್ ರಾಜ್ ಕುಮಾರ್ ಪ್ರತಿಭಾವಂತ ನಟರಾಗಿದ್ದರು ಎಂದು ಟ್ವಿಟರ್ ನಲ್ಲಿ ರಜನಿ ಬರೆದುಕೊಂಡಿದ್ದಾರೆ.

ಆದ್ರೆ ರಜನಿಕಾಂತ್ ಟ್ವಿಟ್ ಗೆ ನೆಟ್ಟಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಣ ಇಷ್ಟೇ.. ರಜನಿಕಾಂತ್ ಟ್ವಿಟ್ ಮಾಡಿ ಹೂಟ್ ಲಿಂಕ್ ಅನ್ನು ಶೇರ್ ಮಾಡಿದ್ದರು.

Rajini saaksha tv

ರಜನಿಕಾಂತ್ ಅವರ ಈ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಇಂತಹ ದುಃಖದ ವಿಚಾರದಲ್ಲೂ ಹೂಟ್ ಆಪ್‍ಗೆ ಪ್ರಚಾರ ಮಾಡಬೇಕಿತ್ತಾ ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಅಂದ ಹಾಗೇ ಹೂಟ್ ಆಪ್ ನ ರೂವಾರಿ ರಜನಿ ಪುತ್ರಿ. ಇದು ವಾಯ್ಸ್ ಸೋಶಿಯಲ್ ಮೀಡಿಯವಾಗಿದೆ.

ರಜನಿಕಾಂತ್ ಅವರು ಪುನೀತ್ ಸಂತಾಪ ಸೂಚಿಸುವಾಗ ಈ ಹೂಟ್ ಆಪ್ ಲಿಂಕ್ ಬಳಕೆ ಮಾಡಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಭಾರತೀಯ ಚಿತ್ರ ರಂಗದ ಗಣ್ಯರು ಪುನೀತ್ ಮನೆಗೆ ಭೇಟಿ ಕೊಡುತ್ತಿದ್ದಾರೆ.

ರಜನಿಕಾಂತ್ ಕೂಡ ಅಪ್ಪು ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಆದ್ರೆ ಯಾವಾಗ ಎಂಬುದು ಇನ್ನೂ ತಿಳಿದು ಬಂದಿಲ್ಲ.

ರಜನಿ ಆರೋಗ್ಯದಲ್ಲಿ ಸ್ಥಿರವಾದ ನಂತರ ಬಂದೇ ಬರುತ್ತಾರೆ. ಯಾಕಂದ್ರೆ ತಲೈವಾಗೆ ರಾಜ್ ಕುಟುಂಬದ ಮೇಲೆ ಗಾಢವಾದ ನಂಟಿದೆ.

ಈಗಾಗಲೇ ಪುನೀತ್ ಅವರ 11 ದಿನದ ಕಾರ್ಯವೂ ಮುಗಿದಿದೆ. ಅಪ್ಪು ಅಗಲಿಕೆಯ ನೋವನ್ನು ಮರೆಯುವುದು ಅಷ್ಟೊಂದು ಸುಲಭವಿಲ್ಲ.

ಗಟ್ಟಿಯಾಗಿದ್ದ ಜೀವ ಕೇವಲ ಅರ್ಧಗಂಟೆಯಲ್ಲಿ ಉಸಿರು ನಿಲ್ಲಿಸುತ್ತೆ ಅನ್ನೋದನ್ನು ಯಾರೂ ಕೂಡ ಊಹೆ ಮಾಡಲು ಸಾಧ್ಯವಾಗುತ್ತಿಲ್ಲ.

ಕನ್ನಡ ಚಿತ್ರ ರಂಗ ಕಂಡ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ನಟನೆಗಿಂತಲೂ ತನ್ನ ಸಾಮಾಜಿಕ ಸೇವೆಯಿಂದ ಜನ ಮಾನಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd