(Rajmouli)
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕ ಅಂದ್ರೆ ಅದು ಪವರ್ ಪ್ಯಾಕ್ ಸಿನೆಮಾಗಳ “ಸರದಾರ “ ರಾಜಮೌಳಿ.. ಅಸಾಧಾರಣ ಚಿತ್ರಗಳಿಂದಲೇ ಎಲ್ಲರ ಮನಗೆಲ್ಲುವ ರಾಜಮೌಳಿ ಅವರಿಗೆ (Rajmouli) ಇಂದು ಹುಟ್ಟುಹಬ್ಬದ ಸಂಭ್ರಮ.. 47ನೇ ವಸಂತಕ್ಕೆ ಕಾಲಿಟ್ಟಿರುವ ರಾಜಮೌಳಿ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.
ರಾಜಮೌಳಿ ಸಿನೆಮಾ ಮಾಡ್ತಿದ್ದಾರೆ ಅಂದ್ರೆ ಇಡೀ ದೇಶದ ಚಿತ್ರರಂಗ ಹಾಗೂ ಸಿನಿರಸಿಕರ ಚಿತ್ತ ಅವರ ಸಿನೆಮಾ ಮೇಲೆ ನೆಟ್ಟಿರುತ್ತೆ.. ಅಷ್ಟರ ಮಟ್ಟಿಗೆ ರಾಜಮೌಳಿ ಅವರ ಡೈರೆಕ್ಷನ್ ಭಾರತೀಯ ಚಿತ್ರರಂಗದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದೆ.. ಇನ್ನೂ ಪ್ರಭಾಸ್ ನಟನೆಯ ಬ್ಲಾಕ್ ಬಾಸ್ಟರ್ ಸಿನಿಮಾ ಬಾಹುಬಲಿ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಸಂಚಲನ ಸೃಷ್ಟಿಸಿತ್ತು. ದೊಡ್ಡ ದೊಡ್ಡ ಸ್ಟಾರ್ ಗಳು ರಾಜಮೌಳಿ ಅವರ ಜೊತೆಗೆ ಸಿನಿಮಾ ಮಾಡೋ ಚಾನ್ಸ್ ಗಾಗಿ ಕಾಯುತ್ತಿರುತ್ತಾರೆ.
ನೆಚ್ಚಿನ ನಿರ್ದೇಶಕನ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಜನ್ಮ ದಿನದ ಶುಭಾಶಯಗಳು ರಾಜಮೌಳಿ, ಅಸಾಧಾರಣ ಸಿನಿಮಾಗಳಿಂದ ಎಲ್ಲರನ್ನೂ ನಿಮ್ಮ ಅಭಿಮಾನಿಗಳನ್ನಾಗಿ ಮಾಡಿದ ಖ್ಯಾತ ನಿರ್ದೇಶಕ ನೀವು ಎನ್ನುತ ಹಾಡಿಹೊಗಳಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ರಾಜಮೌಳಿ ಕೇವಲ ನಿರ್ದೇಶಕ ಮಾತ್ರವಲ್ಲ. ಅವರು ಉತ್ತಮ ಚಿತ್ರಕಥೆಗಾರ, ಸ್ಟಂಟ್ ನಿರ್ದೇಶಕ ಸಹ ಹೌದು. ಆಕ್ಷನ್ ಪ್ಯಾಕ್ ಸಿನಿಮಾಗಳಿಗೆ ರಾಜಮೌಳಿ ಹೆಸರುವಾಸಿ.
ಬಾಹುಬಲಿ ಸಿನಿಮಾ ಮೂಲಕ ರಾಜಮೌಳಿ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ. ದೇಶ ಮಾತ್ರವಲ್ಲದೆ ವಿದೇಶದಲ್ಲೂ ಬಾಹುಬಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಏರಿದೆ. ರಾಜಮೌಳಿ ಜೊತೆ ಸಿನಿಮಾ ಮಾಡಲು ಭಾರತೀಯ ಸಿನಿ ತಾರೆಯರು ಕಾಯುತ್ತಿದ್ದಾರೆ.
ಸ್ಟೂಡೆಂಟ್ ನಂ.1 ಸಿನಿಮಾ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಾಜಮೌಳಿ ಅವರು ಕೆಲವೇ ಸಿನಿಮಾಗಳನ್ನ ಮಾಡಿದ್ರು, ಒಂದೊಂದೂ ಸಿನಿಮಾ ಬಗ್ಗೆ ಜನರು ಇನ್ನಷ್ಟು ವರ್ಷ ಕಳೆದ್ರು ಮಾತನಾಡುವಂತಿರುತ್ತೆ.. ಮಗಧೀರ, ಮರ್ಯಾದ ರಾಮಣ್ಣ, ಚತ್ರಪತಿ, ವಿಕ್ರಮಾರ್ಕುಡು, ಬಾಹುಬಲಿ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದು ಅತ್ಯಂತ ಯಶಸ್ಸು ಕಂಡ ಸಿನಿಮಾಗಳು..
ಸದ್ಯಕ್ಕೆ ರೌಜಮೌಳಿ ಆರ್ ಆರ್ ಆರ್ ಸಿನಿಮಾಗದಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಈ ಹೈ ಬಜೆಟ್ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ. ಒಟ್ಟಾರೆ ಭಾರತ ಚಿತ್ರಂಗಕ್ಕೆ ಅಸಾಧಾರಣ ಸಿನಿಮಾಗಳನ್ನ ಕೊಡುಗೆ ನೀಡಿ ಜನಮನಗೆದ್ದಿರುವ ರಾಜಮೌಳಿಗೆ ಹುಟ್ಟುಹಬ್ಬದ ಶುಭಾಷಯಗಳು.
ಸಿಲ್ವರ್ ಸ್ಕ್ರೀನ್ ಗೆ ಮತ್ತೆ ಅಪ್ಪಳಿಸಲಿವೆ ಶಿವಾರ್ಜುನ, ಜೆಂಟಲ್ ಮೆನ್, ಲವ್ ಮಾಕ್ಟೇಲ್, ದಿಯಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel