ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Politics

ರಾಜ್ಯಸಭಾ ಚುನಾವಣೆ; 144 ಸೆಕ್ಷನ್ ಜಾರಿ!

ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ, ಜೆಡಿಎಸ್ ತಂತ್ರ

Author2 by Author2
February 26, 2024
in Politics, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಾಗೂ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

ಫೆ. 26ರಿಂದ 28ರ ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗದೆ. ರಾಜಕೀಯ ಪಕ್ಷಗಳು, ಹಲವು ಸಂಘಟನೆಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ 144ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ರಿಂದ ಆದೇಶ ನೀಡಲಾಗಿದೆ. ರಾಜ್ಯದ ನಾಲ್ಕು ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಹೀಗಾಗಿ ಅಂದು ಬೆಳಿಗ್ಗೆ 10ರಿಂದ ವಿಧಾನಸೌಧದಲ್ಲಿ ಮತದಾನ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ನಡೆಯಲಿದೆ. ನಂತರ 5 ಗಂಟೆಯವರೆಗೆ ಮತಗಳ ಎಣಿಕೆ ನಡೆಯಲಿದೆ.

Related posts

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

January 21, 2026
ರಾಯರ ಫೋಟೋ ಕಂಡರೆ ಕೆಂಡಾಮಂಡಲ, ಚಾಣಕ್ಯನ ಪುಸ್ತಕಕ್ಕೆ ಜೈ! ವಿವಾದದ ಕಿಡಿ ಹೊತ್ತಿಸಿದ ಸಿಎಂ ಸಿದ್ದರಾಮಯ್ಯ ನಡೆ

ರಾಯರ ಫೋಟೋ ಕಂಡರೆ ಕೆಂಡಾಮಂಡಲ, ಚಾಣಕ್ಯನ ಪುಸ್ತಕಕ್ಕೆ ಜೈ! ವಿವಾದದ ಕಿಡಿ ಹೊತ್ತಿಸಿದ ಸಿಎಂ ಸಿದ್ದರಾಮಯ್ಯ ನಡೆ

January 20, 2026

ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಗೆ ಶಾಕ್ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ತಂತ್ರ ಹೂಡಿವೆ. ಎರಡನೇ ಅಭ್ಯರ್ಥಿ ಮೂಲಕ ಕಾಂಗ್ರೆಸ್ಗೆ ಚೆಕ್ಮೆಟ್ ಕೊಡುವುದಕ್ಕೆ ಸನ್ನದ್ಧವಾಗಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಅಖಾಡಕ್ಕೆ ಇಳಿಸಲಾಗಿದೆ.
ವಿಧಾನಸಭೆ ಬಲಾಬಲದ ಪ್ರಕಾರ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲುವುದಕ್ಕೆ ಅವಕಾಶವಿದೆ. ಆದರೆ, ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 2ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಹೀಗಾಗಿ ಕಾಂಗ್ರೆಸ್ ಗೆ ಅಡ್ಡಮತದಾನದ ಭೀತಿ ಆರಂಭವಾಗಿದೆ. ಓರ್ವ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತದೆ. ಕಾಂಗ್ರೆಸ್ ನ ಸಂಖ್ಯಾಬಲ 135 ಇರುವುದರಿಂದ ಮೂರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಬಹುದು. ಬಿಜೆಪಿ ಸಂಖ್ಯಾಬಲ 66 ಆಗಿದ್ದು, ಕೇವಲ ಒಬ್ಬ ಅಭ್ಯರ್ಥಿಯನ್ನ ಮಾತ್ರ ಗೆಲ್ಲಿಸಬಹುದಾಗಿದೆ.

ಬಿಜೆಪಿ ಹತ್ತಿರ ಇರುವ 66 ಮತಗಳಲ್ಲಿ 45 ಮತಗಳು ಓರ್ವ ಅಭ್ಯರ್ಥಿಗೆ ಹಾಕಿದರೆ 21 ಹೆಚ್ಚುವರಿ ಮತ ಉಳಿಯಲಿವೆ. ಬಿಜೆಪಿ 21 ಮತ, ಜೆಡಿಎಸ್‌ ಬಳಿ ಇರುವ 19, ಪಕ್ಷೇತರ 2, ಕೆಆರ್‌ಪಿಪಿ, ಸರ್ವೋದಯ ಕರ್ನಾಟಕದ ತಲಾ 1 ಮತಗಳನ್ನ ಪಡೆಯಲು ಸಾಧ್ಯವಾದರೆ 44 ಮತ ಕುಪೇಂದ್ರ ರೆಡ್ಡಿ ಪಾಲಾಗಲಿದೆ. ಕಾಂಗ್ರೆಸ್‌ ನಲ್ಲಿನ ಅಸಮಾಧಾನಿತರಿಗೆ ಗಾಳ ಹಾಕಿ ಎರಡು ಅಥವಾ ಮೂರು ಅಡ್ಡ ಮತ ಹಾಕಿಸಿದರೆ, ಕಾಂಗ್ರೆಸ್ ಗೆ ಪೆಟ್ಟು ನೀಡಬಹುದು ಎಂಬುವುದು ಲೆಕ್ಕಾಚಾರವಾಗಿದೆ.

Tags: Rajya Sabha Elections; Enforcement of Section 144!
ShareTweetSendShare
Join us on:

Related Posts

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

ಮಾತು ತಪ್ಪುವ ಜಾಯಮಾನ ನಮ್ಮದಲ್ಲ, ಈಗ ಒಪ್ಪಿ ಮುಂದೆ ಉಲ್ಟಾ ಹೊಡೆಯುವವರಿಗೆ ಡಿ.ಕೆ.ಸುರೇಶ್ ಖಡಕ್ ಎಚ್ಚರಿಕೆ

by Shwetha
January 21, 2026
0

ಕನಕಪುರ: ರಾಜಕಾರಣದಲ್ಲಿ ಮಾತಿಗೆ ತಪ್ಪುವುದು, ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವುದು ಕೆಲವರಿಗೆ ರೂಢಿಯಾಗಿರಬಹುದು. ಆದರೆ, ಕೊಟ್ಟ ಮಾತು ಉಳಿಸಿಕೊಳ್ಳುವುದು ಕನಕಪುರದ ಮಣ್ಣಿನ ಗುಣ. ಇಲ್ಲಿ ಒಮ್ಮೆ ಮಾತು...

ರಾಯರ ಫೋಟೋ ಕಂಡರೆ ಕೆಂಡಾಮಂಡಲ, ಚಾಣಕ್ಯನ ಪುಸ್ತಕಕ್ಕೆ ಜೈ! ವಿವಾದದ ಕಿಡಿ ಹೊತ್ತಿಸಿದ ಸಿಎಂ ಸಿದ್ದರಾಮಯ್ಯ ನಡೆ

ರಾಯರ ಫೋಟೋ ಕಂಡರೆ ಕೆಂಡಾಮಂಡಲ, ಚಾಣಕ್ಯನ ಪುಸ್ತಕಕ್ಕೆ ಜೈ! ವಿವಾದದ ಕಿಡಿ ಹೊತ್ತಿಸಿದ ಸಿಎಂ ಸಿದ್ದರಾಮಯ್ಯ ನಡೆ

by Shwetha
January 20, 2026
0

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೊಮ್ಮೆ ತಮ್ಮ ನಡೆವಳಿಕೆಯಿಂದ ಭಾರೀ ವಿವಾದವೊಂದಕ್ಕೆ ಕಾರಣರಾಗಿದ್ದಾರೆ. ಸದಾ ಒಂದಿಲ್ಲೊಂದು ಧಾರ್ಮಿಕ ವಿಚಾರಗಳಲ್ಲಿ ಸುದ್ದಿಯಾಗುವ ಸಿಎಂ, ಇದೀಗ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ...

ಕುಂದಾನಗರಿ ಕದನ : 2028ಕ್ಕೆ ಮಾಜಿ ಆಗ್ತಾರೆ ಎಂಬ ರಮೇಶ್ ಮಾತಿಗೆ ಸತೀಶ್ ಜಾರಕಿಹೊಳಿ ಖಡಕ್ ತಿರುಗೇಟು

ಕುಂದಾನಗರಿ ಕದನ : 2028ಕ್ಕೆ ಮಾಜಿ ಆಗ್ತಾರೆ ಎಂಬ ರಮೇಶ್ ಮಾತಿಗೆ ಸತೀಶ್ ಜಾರಕಿಹೊಳಿ ಖಡಕ್ ತಿರುಗೇಟು

by Shwetha
January 19, 2026
0

ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣ ಸದಾ ಕುತೂಹಲದ ಕೇಂದ್ರಬಿಂದು. ಇದೀಗ ಮತ್ತೊಮ್ಮೆ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. 2028ಕ್ಕೆ ಸತೀಶ್...

ಮೈಸೂರು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ದಳಪತಿಗಳ ರಹಸ್ಯ ಸಭೆ ಜಿಟಿಡಿಗೆ ಗೇಟ್ ಪಾಸ್ ನಿಖಿಲ್ ಕುಮಾರಸ್ವಾಮಿಗೆ ಹೊಸ ಅಖಾಡ

ಮೈಸೂರು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ದಳಪತಿಗಳ ರಹಸ್ಯ ಸಭೆ ಜಿಟಿಡಿಗೆ ಗೇಟ್ ಪಾಸ್ ನಿಖಿಲ್ ಕುಮಾರಸ್ವಾಮಿಗೆ ಹೊಸ ಅಖಾಡ

by Shwetha
January 19, 2026
0

ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಕಳೆಗುಂದಿರುವ ಜಾತ್ಯತೀತ ಜನತಾ ದಳಕ್ಕೆ (ಜೆಡಿಎಸ್) ಮರುಜೀವ ನೀಡಲು ಪಕ್ಷದ ವರಿಷ್ಠರು ಮುಂದಾಗಿದ್ದು, ಭಾನುವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪದ್ಮನಾಭನಗರ...

ಬಿಜೆಪಿಗೆ ಸಂಸ್ಕೃತಿಯೂ ಇಲ್ಲ, ನಮ್ಮನ್ನು ಪ್ರಶ್ನಿಸುವ ನೈತಿಕತೆಯೂ ಇಲ್ಲ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬಿಜೆಪಿಗೆ ಸಂಸ್ಕೃತಿಯೂ ಇಲ್ಲ, ನಮ್ಮನ್ನು ಪ್ರಶ್ನಿಸುವ ನೈತಿಕತೆಯೂ ಇಲ್ಲ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

by Shwetha
January 19, 2026
0

ಮೈಸೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ನೀಡಿರಲಿಲ್ಲ. ಹೀಗಿರುವಾಗ ನಮ್ಮನ್ನು ಪ್ರಶ್ನಿಸಲು ಬಿಜೆಪಿಗೆ ಯಾವ ನೈತಿಕ ಹಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram