Rakhi Sawant : ಗುಟ್ಟಾಗಿ ಮದುವೆಯಾದ ರಾಖಿ ಸಾವಂತ್
ರಿಜಿಸ್ಟರ್ ಮ್ಯಾರೇಜ್ ಫೋಟೋ ವೈರಲ್
ಆದಿಲ್ ದುರ್ರಾನಿ ಜೊತೆಗೆ ರಾಖಿ ವಿವಾಹ
ಮೈಸೂರು ಹುಡುಗ ಆದಿಲ್ ದುರ್ರಾನಿ
ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ರಾಖಿ
ಬಾಲಿವುಡ್ ನ ಡ್ರಾಮಾ ಕ್ವೀನ್ ರಾಕಿ ಸಾವಂತ್ ಏನಾದ್ರೂ ಒಂದು ನೌಟಂಕಿಯಿಂದಲೇ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ.. ಅದ್ರಲ್ಲೂ ತಮ್ಮ ರಿಲೀಷನ್ ಶಿಪ್ ವಿಚಾರವಾಗಿಯೇ ಸುದ್ದಿಯಲ್ಲಿರುವ ರಾಕಿ ಕೆಲ ದಿನಗಳಿಂದ ಮೈಸೂರು ಮೂಲದ ಹುಡುಗ ಆದಿಲ್ ಶಾ ಜೊತೆಗೆ ಡೇಟಿಂಗ್ ನಲ್ಲಿರುವ ವಿಚಾರ ಎಲ್ರಿಗೂ ಗೊತ್ತೇ ಇದೆ..
ಇದೀಗ ಮೈಸೂರು ಹುಡುಗ ಆದಿಲ್ ಜೊತೆಗೆ ರಾಖಿ ಸಾವಂತ್ ಗುಟ್ಟಾಗಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.. ಇದಕ್ಕೆ ಪೂರಕವೆಂಬಂತೆ ಇಬ್ಬರೂ ಕೂಡ ರಿಜಿಸ್ಟಾರ್ ಮದುವೆಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ..
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ಸಾಕಷ್ಟು ಊರುಗಳನ್ನು ಸುತ್ತಿದ್ದರು ರಾಖಿ. ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು.
ನಿನ್ನೆಯಷ್ಟೇ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಸುದ್ದಿಯನ್ನು ಹಂಚಿಕೊಂಡಿದ್ದರು. ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು.
ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.