Rakhi Sawant : ಬಾಲಿವುಡ್ ನಟಿ ರಾಖಿ ಸಾವಂತ್ ಅರೆಸ್ಟ್ – ಶೆರ್ಲಿನ್ ಚೋಪ್ರಾ ದೂರಿನ ಮೇರೆಗೆ ಕ್ರಮ…
ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ನಟಿ ಶೆರ್ಲಿನ್ ಚೋಪ್ರಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಾಖಿ ಸಾವಂತ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶೆರ್ಲಿನ್ ಚೋಪ್ರಾ ಅವರು ರಾಖಿ ಸಾವಂತ್ ತನ್ನ ಅನುಚಿತ ವೀಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ರಾಖಿ ಸಾವಂತ್ ವಿರುದ್ಧ ಸೆಕ್ಷನ್ 354A, 506, 504 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂಬೈನ ಅಂಬೋಲಿ ಪೊಲೀಸರು ರಾಖಿಯನ್ನು ಬಂಧಿಸಿ ಠಾಣೆಗೆ ಕೆರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ನಂತರ ಅವರನ್ನ ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ರಾಖಿ ಸಾವಂತ್ ಮತ್ತು ಶೆರ್ಲಿನ್ ಚೋಪ್ರಾ ನಡುವೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆಯುತ್ತಿತ್ತು. ಬಾಲಿವುಡ್ ನಿರ್ದೇಶಕ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಾಜಿದ್ ಖಾನ್ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಆರೋಪಿಸಿದ್ದಾರೆ. ಆದರೆ, ರಾಖಿ ಸಾಜಿದ್ ಖಾನ್ ಅವರನ್ನ ಬೆಂಬಲಿಸಿದ್ದರು. ಇದು ಶೆರ್ಲಿನ್ ಮತ್ತು ರಾಖಿ ನಡುವೆ ಸಂಘರ್ಷಕ್ಕೆ ಕಾರಣವಾಯಿತು.
Rakhi Sawant : Bollywood Actress Rakhi Sawant Arrest – Action on Sherlyn Chopra’s Complaint…








