ರಾಮ್ ಚರಣ್ – ಶಂಕರ್ ಹೊಸ ಸಿನಿಮಾದಲ್ಲಿ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ ಸ್ಟಾರ್ ನಟರು…!
ಟಾಲಿವುಡ್ ನ ಸ್ಟಾರ್ ನಟ ರಾಮಚರಣ್ ಹಾಗೂ ತಮಿಳು ಅಷ್ಟೇ ಅಲ್ದೇ ಭಾರತದ ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಶಂಕರ್ ಅವರ ಕಾಂಬಿನೇಷನ್ ನಲ್ಲಿ ಬಿಗ್ ಬಜೆಟ್ ಸಿನಿಮಾ ಮೂಡಿಬರುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಈ ಸಿನಿಮಾ ಸಾಕಷ್ಟು ವಿಚಾರಗಳಿಂದ ಪ್ರತಿದಿನ ಸುದ್ದಿಯಲ್ಲೇ ಇರುತ್ತೆ.. ಅದು ನಾಯಕಿಯ ವಿಚಾರವಾಗಿಯೇ ಇರಬಹುದು…
ಅಥವ ಶಂಕರ್ ಖುದ್ದು ಸಿನಿಮಾದಲ್ಲಿ ನಟನೆ ಮಾಡಲಿದ್ದಾರೆಂಬ ಊಹಾಪೋಹವೂ ಇರಬಹುದು. ಅಂದ್ಹಾಗೆ ಈ ಸಿನಿಮಾದಲ್ಲಿ ಶಂಕರ್ ಅವರು ನಟನೆ ಮಾಡಬಹುದು ಎನ್ನಲಾಗ್ತಿದೆ. ಮತ್ತೊಂದೆಡೆ ಸಿನಿಮಾದ ನಾಯಕಿಯರ ಲಿಸ್ಟ್ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳ ಹೆಸರೇ ಕೇಳಿ ಬರುತ್ತಿದೆ. ಆದ್ರೆ ಅಂತಿಮವಾಗಿ ಯಾರು ನಾಯಕಿ ಎನ್ನುವುದು ಅಧಿಕೃತ ಘೋಷಣೆ ಬಳಿಕವಷ್ಟೇ ಗೊತ್ತಾಗಬೇಕಿದೆ.
ಅಲ್ಲದೇ ಬಿಗಿಲ್, ದರ್ಬಾರ್, ಸೂರರೈ ಪೊಟ್ರು ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಿಗೆ ಸಾಹಿತ್ಯ ರಚಿಸಿರುವ ಖ್ಯಾತ ಗೀತರಚನೆಕಾರ ವಿವೇಕ್ ಈ ಸಿನಿಮಾ ಟೀಮ್ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಎಲ್ಲದಕ್ಕೂ ಮೀರಿ ಸಿನಿಮಾದಲ್ಲಿ ಬಾಲಿವುಡ್ ,ಟಾಲಿವುಡ್ , ಸ್ಯಾಂಡಲ್ ನ ಬಿಗ್ ಸ್ಟಾರ್ ಗಳು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆಎನ್ನಲಾಗಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಸುದೀಪ್, ರಾಕಿಂಗ್ ಸ್ಟಾರ್ ಯಶ್ ತೆಲುಗಿನ ಸ್ಟಾರ್ ನಟ ಚಿರಂಜೀವಿ, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾದಲ್ಲಿ ದರ್ಶನ ನೀಡಲಿದ್ದಾರೆ ಎನ್ನಲಾಗಿದೆ.