ನಮ್ಮನ್ನ ಒಗ್ಗೂಡಿಸೋಕೆ ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ : ರಮೇಶ್ ಜಾರಕಿಹೊಳಿ

1 min read

ನಮ್ಮನ್ನ ಒಗ್ಗೂಡಿಸೋಕೆ ಯೋಗೇಶ್ವರ್ 9 ಕೋಟಿ ಸಾಲ ಮಾಡಿದ್ದಾರೆ : ರಮೇಶ್ ಜಾರಕಿಹೊಳಿ

ಬೆಳಗಾವಿ : ಸಿ.ಪಿ.ಯೋಗೇಶ್ವರ್ ಗೆ ಸಚಿವಸ್ಥಾನ ನೀಡಿರುವ ವಿಚಾರವಾಗಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ರೇಣುಕಾಚಾರ್ಯ, ತಿಪ್ಪಾರೆಡ್ಡಿ, ಹೆಚ್ ವಿಶ್ವನಾಥ್ ಸೇರಿದಂತೆ ಹಲವು ಮಂದಿ ಈ ವಿಚಾರವಾಗಿ ಫುಲ್ ಗರಂ ಆಗಿದ್ದಾರೆ. ಏತನ್ಮಧ್ಯೆ ಸಿಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದನ್ನು ಸಚಿವ ರಮೇಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿ ಪಿ ಯೋಗೇಶ್ವರ್ ವಲಸಿಗರನ್ನು ಒಟ್ಟುಗೂಡಿಸಲು ತಮ್ಮ ಮನೆ ಮೇಲೆ 9 ಕೋಟಿ ಸಾಲ ಮಾಡಿಕೊಂಡಿದ್ದಾರೆ.

ramesh jarakiholi

ಯೋಗೀಶ್ವರ್ ಗೆ ನಮ್ಮನ್ನು ಒಗ್ಗೂಡಿಸುವುದು ಯಾಕೆ ಬೇಕಿತ್ತು.? ಕಷ್ಟ ಪಟ್ಟು ಆರೋಗ್ಯ ಹಾಳು ಮಾಡಿಕೊಳ್ಳೋದು ಯಾಕೆ ಬೇಕಿತ್ತು.?

ಇದೆಲ್ಲಾ ನಮಗೋಸ್ಕರ ಯೋಗೀಶ್ವರ್ ಯಾಕೆ ಮಾಡ್ಬೇಕಿತ್ತು.? ಯೋಗೇಶ್ವರ್ ಅವರನ್ನ ಸಚಿವರನ್ನಾಗಿ ಮಾಡಿದ್ದು ಸರಿಯಿದೆ ಎಂದು ಹೇಳಿದ್ದಾರೆ.

ಇನ್ನು ಸಚಿವ ಎಂಟಿಬಿಯಿಂದ ಯೋಗೀಶ್ವರ್ ಸಾಲ ತಂದಿದ್ದರು. ಈಗ ಮಾತನಾಡುವ ಶಾಸಕರು ಆಗ ಎಲ್ಲಿದ್ರು ಎಂದು ಪ್ರಶ್ನಿಸಿದ ರಮೇಶ್ ಜಾರಕಿಹೊಳಿ, ಯೋಗೀಶ್ವರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ.

ಸರ್ಕಾರದ ರಚನೆಯಲ್ಲಿ ಯೋಗೀಶ್ವರ್ ಪಾತ್ರ ದೊಡ್ಡದಿದೆ ಎಂದು ಹೇಳಿದ್ದಾರೆ.

Our Website : https://saakshatv.com/

Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd