ಜೆಡಿಎಸ್ ಸಖ್ಯ ಬೆಳೆಸುತ್ತಾರಾ… ಜಾರಕಿಹೊಳಿ ಸಹೋದರರು ?? ಸಿ ಎಂ ಇಬ್ರಾಹಿಂ ಸುಳಿವು..
ಬಿಜೆಪಿ ಸಖ್ಯದಿಂದ ದೂರುವಾಗಿ ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರುತ್ತಾರ ಎನ್ನುವ ಅಚ್ಚರಿಯನ್ನ ಜೆಡಿಎಸ್ ರಾಜ್ಯಧ್ಯಕ್ಷ ಸಿ ಎಂ ಇಬ್ರಾಹಿಂ ಕೊಟ್ಟಿದ್ದಾರೆ. ಜೆಡಿಎಸ್ನವರು ಜಾರಕಿಹೊಳಿ ಸಹೋದರರು, ಈಗ ನೋಡ್ಕೊಂಡು ಹೋಗಿದ್ದಾರೆ.. ಇನ್ನೂ ತಾಳಿ ಕಟ್ಟಿಲ್ಲ ಎಂದು ರಮೇಶ್ ಜಾರಕಿಹೊಳಿ ಜೆಡಿಎಸ್ ಸೇರ್ಪಡೆ ಬಗ್ಗೆ ಸಿ ಎಂ ಇಬ್ರಾಯಿಂ ಸೂಚನೆ ಕೊಟ್ಟಿದ್ದಾರೆ.
ಈ ಬಗ್ಗೆ ಕಿತ್ತೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ತಾಳಿ ಕಟ್ಟುವ ಮುಂಚೆ ಯಾವ ಹೆಣ್ಣೂ ಮದುವೆ ಆಗಿದೆ ಅನ್ನಲ್ಲ, ಈಗ ಬಂದು ನೋಡ್ಕೊಂಡು ಹೋಗಿದ್ದಾರೆ ಎಂದಷ್ಟೇ ಹೇಳ್ತಾರೆ. ನಿಶ್ಚಿತಾರ್ಥ ಆದ್ರೂ ಹೇಳಲ್ಲ, ತಾಳಿ ಕಟ್ಟಿದ ಮೇಲೆಯೇ ಹೆಂಡ್ತಿ, ಡೋರ್ ಓಪನ್ ಇದೆ, ಏನು ಸಂದೇಶ ಕೊಡ್ಬೇಕೋ ಕೊಡ್ತಿದ್ದಾರೆ.
ಇಬ್ಬರು ನಾಯಕರ ಮಧ್ಯೆ ಪರಸ್ಪರ ಸಂದೇಶ ಹೋಗ್ತಿವೆ, ಬರ್ತಿವೆ, ಜೆಡಿಎಸ್ ಸೇರ್ಪಡೆ ಖಚಿತವಾಗುವುದು ಮಾತುಕತೆ 100% ಆದಗಲೇ, ಒಂದು ಸಭೆ ಮಾಡಿ ಡಿಕ್ಲೇರ್ ಮಾಡಿದಾಗಲೇ ಅದು ಬಹಿರಂಗವಾಗಲಿದೆ ಎಂದು ಅಚ್ಚರಿಯ ಹೇಳಿಕೆ ಉಂಟು ಮಾಡಿದ್ದಾರೆ.
ಮತ್ತೊಂದೆಡೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟಿವ್ ಆಗಿದ್ದು ಚುನಾವಣೆ ಹತ್ತಿರವಾಗುತ್ತಿದ್ದಂತೆ ಲಕ್ಷ್ಮೀ ಅವರನ್ನ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಕ್ಷೇತ್ರದಲ್ಲಿ ಸೋಲಿಸಲು ತಯಾರಿ ನಡೆಸುತ್ತಿದ್ದಾರೆ.
Ramesh Jarkiholi : Jarkiholi Brothers Will join Jds ?? C M Ibrahim Hint..