ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ : ರಮೇಶ್ ಜಾರಕಿಹೊಳಿ ( ramesh-jarkiholi )
ಬೆಂಗಳೂರು : ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ. ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಎರಡನೇ ವಿಡಿಯೋ ಹೇಳಿಕೆ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಯುವತಿ ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ಇಂತಹ 10 ವೀಡಿಯೋ ಬರಲಿ ನಾನು ಹೆದರಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ.
ರಾಜಕೀಯವಾಗಿ ಎದುರಿಸಲು ಸಿದ್ಧನಿದ್ದೇನೆ. ಈ ರೀತಿಯ 10 ವೀಡಿಯೋಗಳು ಬಂದ್ರೂ ಎದುರಿಸುವ ಶಕ್ತಿ ನನ್ನಲಿದೆ. ಪ್ರಕರಣ ಸಂಬಂಧ ಹೇಳಿಕೆ ನೀಡಬಾರದು ಎಂದು ವಕೀಲರು ಸೂಚನೆ ನೀಡಿದ್ದಾರೆ. ಆದ್ರೆ ಇಂದು ಸ್ಪಷ್ಟನೆ ನೀಡೋದು ಅನಿವಾರ್ಯ. ಆ ಯುವತಿ ಎಷ್ಟು ಒತ್ತಡದಲ್ಲಿದ್ದಾಳೆ ಅನ್ನೋದು ವೀಡಿಯೋದಲ್ಲಿ ಕಾಣುತ್ತಿದೆ.
ನಾನು ಮಾತ್ರ ಯಾವುದೇ ತಪ್ಪು ಮಾಡಿಲ್ಲ. ಅವರನ್ನ ಜೈಲಿಗೆ ಕಳುಹಿಸದೇ ಬಿಡಲ್ಲ. ವೀಡಿಯೋದಲ್ಲಿ ಹೇಳುವ ಯುವತಿ ಪೊಲೀಸರ ಮುಂದೆ ಬಂದು ಹೇಳಲಿ. ನಾವು ಸಹ ಹಲವು ದಾಖಲೆ ಸಂಗ್ರಹಿಸಿದ್ದು, ಸದ್ಯ ನನ್ನ ಜೇಬಿನಲ್ಲಿರೋ ದಾಖಲೆ ತೋರಿಸಿದ್ರೆ ಎಲ್ಲರೂ ಶಾಕ್ ಆಗ್ತಾರೆ.
ಮಹಾ ನಾಯಕನ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಆದ್ರೆ ನಾನು ಕಾನೂನು ಹೋರಾಟ ನಡೆಸಿ ನಿರ್ದೋಷಿ ಆಗಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸದನದಲ್ಲಿ ಕಾಂಗ್ರೆಸ್ ಧರಣಿ ಬಗ್ಗೆ ಮಾತನಾಡಿದ ಅವರು, ಮೊನ್ನೆವರೆಗೂ ವಿಪಕ್ಷಗಳು ಹಾಗೂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರಗೌರವ ಇತ್ತು. ರೇಪ್ ಕೇಸ್ ಹಾಕಿ ಅಂತ ಹೇಳಿದಾಗ ನನಗೂ ಒಂದು ಕ್ಷಣ ಶಾಕ್ ಆಯ್ತು. ಯಾಕೆ ಅವರು ಹಾಗೆ ಹೇಳಿದ್ರೂ ಅನ್ನೋದು ಗೊತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹೇಳಿದರು.