ಪ್ರಕಾಶ್ ರಾಜ್ “ನಮ್ಮವರಲ್ಲ” ಎಂದ ಟಾಲಿವುಡ್ ಮಂದಿಗೆ ತಕ್ಕ ಉತ್ತರ ನೀಡಿದ ರಾಮ್ ಗೋಪಾಲ್ ವರ್ಮಾ
ಇತ್ತೀಚೆಗೆ ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ‘ಮಾ’ ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಸ್ಪರ್ಧೆ ಮಾಡುತ್ತಿದ್ದು, ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಗಳಾಗಿ ಮಂಚು ವಿಷ್ಣು, ಜೀವಿತಾ ರಾಜಶೇಖರ್ ಸಹ ಅಖಾಡದಲ್ಲಿದ್ದಾರೆ. ಆದ್ರೆ ಪ್ರಕಾಶ್ ರಾಜ್ ಸ್ಪರ್ಧೆಗೆ ಟಾಲಿವುಡ್ ನ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಲದಕ್ಕೆ ಪ್ರಕಾಶ್ ರಾಜ್ ತೆಲುಗಿನವರಲ್ಲ, ನಮ್ಮವರಲ್ಲ ಬೇರೆ ರಾಜ್ಯದವರು. ಅವರು ಏಕೆ ‘ಮಾ’ ಅಧ್ಯಕ್ಷರಾಗಬೇಕು ಎಂದು ಪ್ರಶ್ನಿಸಿ ಹೀಯಾಳಿಸಿದ್ದಾರೆ. ಈ ಪೈಕಿ ಮಾಧವಿ ಲತಾ, ಕರಾಟೆ ಕಲ್ಯಾಣಿ, ಚಿಟ್ಟಿಬಾಬು ಇದ್ದಾರೆ.
ಇದಕ್ಕೆ ಪ್ರಕಾಶ್ ರಾಜ್ ಅವರು ಸಹ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿಯೇ ಉತ್ತರ ನೀಡಿದ್ದರು. ಇದೀಗ ಅವರ ಬೆಂಬಲಕ್ಕೆ ವಿವಾದಿತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರು ಬಂದಿದ್ದಾರೆ.. ಹೌದು ‘ಪ್ರಕಾಶ್ ರಾಜ್ ನಾನ್ ಲೋಕಲ್’ ಎಂಬ ಹೇಳಿಕೆಯನ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಖಂಡಿಸಿದ್ದಾರೆ. ಪ್ರಕಾಶ್ ರಾಜ್ ನಾನ್ ಲೋಕಲ್ ಎನ್ನುವುದಾದರೆ ಎನ್‌ಟಿಆರ್, ನಾಗೇಶ್ವರರಾವ್, ಮೋಹನ್ ಬಾಬು, ಸೂಪರ್ ಸ್ಟಾರ್ ರಜನಿಕಾಂತ್, ಅಮಿತಾಭ್ ಬಚ್ಚನ್ ಇವರೆಲ್ಲ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಕಾಶ್ ರಾಜ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ರಾಮ್ ಗೋಪಾಲ್ ವರ್ಮಾ, ‘ಕರ್ನಾಟಕದಿಂದ ಬಂದಿರುವ ಪ್ರಕಾಶ್ ರಾಜ್ ಅವರನ್ನು ನಾನ್ ಲೋಕಲ್ ಎನ್ನುವುದಾದರೆ ಗುಡಿವಾಡದಿಂದ ಚೆನ್ನೈಗೆ ತೆರಳಿದ್ದ ನಂದಮೂರಿ ತಾರಕ್ ರಾಮಾರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಬುರ್ರಿಪಾಲೇಂನಿಂದ ಮದ್ರಾಸ್‌ಗೆ ಹೋಗಿದ್ದ ಕೃಷ್ಣ, ತಿರುಪತಿಯಿಂದ ಮದ್ರಾಸ್‌ಗೆ ತೆರಳಿದ್ದ ಮೋಹನ್ ಬಾಬು ಅವರು ಲೋಕಲ್? ಹೇಗೆ ಹೇಗೆ ಹೇಗೆ…?’ ಎಂದು ಪ್ರಶ್ನಿಸಿದ್ದಾರೆ.
“ಬೇರೆ ರಾಜ್ಯದವರು” ಎಂದ ಟಾಲಿವುಡ್ ಸೆಲೆಬ್ರಿಟಿಗಳಿಗೆ ನಾವು “ಯಾವ ದೇಶದಲ್ಲಿದ್ದೇವೆ..?” ಎಂದ ಪ್ರಕಾಶ್ ರಾಜ್..!
ಅಲ್ಲದೇ ‘ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಬಂದ ಪ್ರಕಾಶ್ ರಾಜ್ ನಾನ್ ಲೋಕಲ್ ಆದ್ರೆ, ಮಹಾರಾಷ್ಟ್ರದಿಂದ ಎಲ್ಲೇಲ್ಲೊ ಹೋದ ರಜನಿಕಾಂತ್, ಉತ್ತರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಹೋದ ಅಮಿತಾಭ್ ಬಚ್ಚನ್ ಲೋಕಲ್ ಆಗ್ತಾರಾ?…ಹೇಗೆ ಹೇಗೆ ಹೇಗೆ…?’ ಆಡಿಕೊಂಡವರು ಬಾಯಿಮುಚ್ಚಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ‘ಸುಮಾರು 30 ವರ್ಷದಿಂದ ಇಲ್ಲಿಯೇ ಇದ್ದು ತೆಲುಗು ಕಲಿತುಕೊಂಡು, ಪತ್ನಿ ಮತ್ತು ಮಕ್ಕಳ ಜೊತೆ ಇಲ್ಲಿಯೇ ವಾಸವಿದ್ದು, ಹಲವು ಪುಸ್ತಕಗಳನ್ನು ತಾವೇ ಮುದ್ರಿಸಿ, ತೆಲಂಗಾಣದಲ್ಲಿ ಎರಡು ಗ್ರಾಮಗಳನ್ನು ದತ್ತು ಪಡೆದು, ಅಲ್ಲಿರುವ ಮಹಿಳೆಯವರಿಗೆ ಕೆಲಸ ಕಲ್ಪಿಸಿಕೊಟ್ಟವರು ನಾನ್ ಲೋಕಲ್?’ ಎಂದು ರಾಮ್ ಗೋಪಾಲ್ ವರ್ಮಾ ಪ್ರಕಾಶ್ ರಾಜ್ ಅವರನ್ನ ಟೀಕಿಸಿದ ಸೆಲೆಬ್ರಿಟಿಗಳ ಬಣದ ವಿರುದ್ಧ ಾಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ. ‘ಅವರ ನಟನೆ ಮೆಚ್ಚಿ ಈ ದೇಶ 4 ಸಲ ಅವರಿಗೆ ಶಾಲು ಹೊದಿಸಿ ರಾಷ್ಟ್ರ ಪ್ರಶಸ್ತಿ ನೀಡಿದೆ. ಅವರನ್ನು ನಾನ್ ಲೋಕಲ್ ಎಂದು ಹೀಯಾಳಿಸುತ್ತೀರಾ. ಇದು ದೇಶದ ವಿರುದ್ಧವಾಗಿ ನೀಡುತ್ತಿರುವ ಹೇಳಿಕೆ’ ಎಂದು ಟೀಕಿಸಿದ್ದಾರೆ. ಜೊತೆಗೆ ‘ನೀವೆಲ್ಲ ತುಂಬಾ ಇಷ್ಟಪಡುವ ನಾಯಕಿಯರು ನಾನ್ ಲೋಕಲ್. ಪ್ರಮುಖವಾಗಿ ಮೈಕಲ್ ಜಾಕ್ಸನ್ ನಾನ್ ಲೋಕಲ್, ಬ್ರೂಸ್ ಲೀ ನಾನ್ ಲೋಕಲ್, ರಾಮ, ಸೀತೆ ಜೊತೆಗೆ ಪ್ರಕಾಶ್ ರಾಜ್ ಸಹ ನಾನ್ ಲೋಕಲ್’ ಎಂದು ಟ್ವೀಟ್ ಮಾಡಿ ತಿವಿದಿದ್ದಾರೆ. ಇನ್ನೂ ಪ್ರಕಾಶ್ ರಾಜ್ ಗೆ ನಾಗಬಾಬು, ಶ್ರೀಕಾಂತ್, ಬಂಡ್ಲಗಣೇಶ್ ಸೇರಿದಂತೆ ಮೆಗಾ ಕುಟುಂಬದ ಆಪ್ತರು ಬೆಂಬಲಿಸಿದ್ದಾರೆ.
ಡಾ. ರಾಜ್ ಕುಮಾರ್ ಅವರ ವಿಚಾರದಲ್ಲಿ ಮಾಡಿದ್ದ ತಪ್ಪನ್ನು ಸರಿಪಡಿಸಿಕೊಂಡ ಗೂಗಲ್
ಇದಕ್ಕೂ ಮೊದಲು ಇದಕ್ಕೆ ಉತ್ತರ ನೀಡಿದ್ದ ಪ್ರಕಾಶ್ ರಾಜ್ ಅವರು ‘ಇದ್ದಕ್ಕಿದ್ದಂತೆ ಲೋಕಲ್, ನಾನ್ ಲೋಕಲ್ ಎಂಬ ಭೇದ ಎಲ್ಲಿಂದ ಬಂತು, ನಾವು ಯಾವ ದೇಶದಲ್ಲಿದ್ದೇವೆ ಅರ್ಥವಾಗುತ್ತಿಲ್ಲ. ಇಲ್ಲಿ ಯಾರು ನಾನ್ ಲೋಕಲ್ ಅಲ್ಲ, ಕಲಾವಿದರು ಯೂನಿವರ್ಸಲ್’ ಎಂದು ತಿರುಗೇಟು ಕೊಟ್ಟಿದ್ದರು. ಅಲ್ಲದೇ ನಂದಿ ಪ್ರಶಸ್ತಿ ಪಡೆದಾಗ ಯಾರು ಪ್ರಶ್ನಿಸಿಲ್ಲ. ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಲ್ಲಿ ಹೋಗಿದ್ದರು. ಈಗ ಎಲ್ಲಿಂದ ಬಂತು ನಾನ್ ಲೋಕಲ್ ಮಾತು, ಇದು ಬಹಳ ಸಂಕುಚಿತ ಮನೋಭಾವ ತೋರಿಸುತ್ತದೆ’ ಎಂದು ಬೇಸರ ಹೊರಹಾಕಿದ್ದರು.
ಔತಣಕೂಟದಲ್ಲಿ ನಾನ್ ವೆಜ್ ಇಲ್ಲದಕ್ಕೆ ವಧು ಬಿಟ್ಟು ಬೇರೊಬ್ಬಳಿಗೆ ತಾಳಿ ಕಟ್ಟಿದ..!