Sports | ಕ್ರೀಡಾ ಜಗತ್ತಿನ ಟಾಪ್ 5 ಇಂಟರೆಸ್ಟಿಂಗ್ ಸುದ್ದಿ
01 . ಅಂಡರ್-19 ವಿಶ್ವಕಪ್ ಹೀರೋ ಯಶ್ ಧೂಳ್, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ರಣಜಿ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಯಶ್ ಶತಕ ಸಿಡಿಸಿದ್ದಾರೆ. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ತಮಿಳುನಾಡು ಮುಖಾಮುಖಿಯಾಗಿದ್ದವು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಯಶ್ ಧುಲ್ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.
Yash Dull | ಚರಿತ್ರೆ ಸೃಷ್ಟಿಸಿದ ಯಶ್ ಧೂಳ್
02. ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿರುವುದಾಗಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಿಳಿಸಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಹಾ ಅವರನ್ನ ಬಿಸಿಸಿಐ ಪರಿಗಣಿಸಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಸಹಾ ಅಸಮಾಧಾನ ಹೊರಹಾಕಿದ್ದಾರೆ.
Wriddhiman saha | ಸಹಾಗೆ “ವಿದಾಯ”ದ ಸಲಹೆ ಕೊಟ್ಟ ದ್ರಾವಿಡ್..!!
03. ಯುನಿವರ್ಲಸ್ ಬಾಸ್ ಕ್ರಿಸ್ ಗೇಲ್ ಹೆಡ್ ಕೋಚ್ ಅವತಾರ ಎತ್ತಲು ರೆಡಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಕ್ರಿಸ್ ಗೇಲ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ನಾನು ಮುಂದಿನ ಸೀಸನ್ ಯಿಂದ ಹೆಡ್ ಕೋಚ್ ಆಗಲಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ. ಕ್ರಿಸ್ ಕೋಚ್ ಆಗುತ್ತಿರೋದು ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ. ಅದು ಕೂಡ ಬಾಬರ್ ಅಜಂ ನೇತೃತ್ವದ ಕರಾಚಿ ಕಿಂಗ್ಸ್ ತಂಡಕ್ಕೆ.
Chris Gayle | ಈ ತಂಡಕ್ಕೆ ಹೆಡ್ ಕೋಚ್ ಆಗಲಿದ್ದಾರೆ ಕ್ರಿಸ್ ಗೇಲ್
04. ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿ ತನ್ನ ಹೆಡ್ ಕ್ವಾರ್ಟಸ್ ಗೆ ಸಂಬಂಧಿಸಿದಂತೆ ಪ್ರಮುಖ ವ್ಯಕ್ತಿಯನ್ನ ಭೇಟಿಯಾಗಿದೆ. ಎಲ್ ಎಸ್ ಜಿ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ಮಾರ್ಗದರ್ಶಕ ಮತ್ತು ದೆಹಲಿ ಸಂಸದ ಗೌತಮ್ ಗಂಭೀರ್ ಅವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ ಫ್ರಾಂಚೈಸಿಯ ಮೊದಲ ಬ್ಯಾಟ್ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ.
IPL 2022 | ಸಿಎಂ ಯೋಗಿ – ಲಕ್ನೋ ತಂಡ ಮಾಲೀಕ ಭೇಟಿ
05. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಂದಿನ ಸಭೆಯು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. 2023 ರಲ್ಲಿ ನಡೆಯಲಿರುವ ಈ ವಾರ್ಷಿಕ ಸಭೆಯನ್ನು ಆಯೋಜಿಸುವ ಮತದಾನದಲ್ಲಿ ಭಾರತವು 76 ಮತಗಳಲ್ಲಿ 75 ಮತಗಳನ್ನು ಪಡೆದುಕೊಂಡಿದೆ.
Ranaji update Yash dull Rahul dravid chris saaksha tv