Ranji Trophy 2022 | ನಿನ್ನ ಸಹನೆಗೆ ಸಲಾಂ.. ಸೂಪರ್ ಸರ್ಫರಾಜ್..

1 min read
ind-vs-ban-sarfaraz-khan-likely-receive-maiden-test-call saaksha tv

ind-vs-ban-sarfaraz-khan-likely-receive-maiden-test-call saaksha tv

Ranji Trophy 2022 | ನಿನ್ನ ಸಹನೆಗೆ ಸಲಾಂ.. ಸೂಪರ್ ಸರ್ಫರಾಜ್..

ಮುಂಬೈ ಕ್ರಿಕೆಟರ್ ಸರ್ಫರಾಜ್ ಖಾನ್ ತಮ್ಮ ಫಸ್ಟ್ ಕ್ಲಾಸ್ ಕೆರಿಯರ್ ನಲ್ಲಿ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.

ರಣಜಿ ಟ್ರೋಫಿ 2022 ರ ಋತುವಿನಲ್ಲಿ ಈಗಾಗಲೇ ಮೂರು ಶತಕಗಳನ್ನು ಬಾರಿಸಿರುವ ಸರ್ಫರಾಜ್ ಇತ್ತೀಚೆಗೆ ತಮ್ಮ ನಾಲ್ಕನೇ ಶತಕವನ್ನುಸಿಡಿಸಿದ್ದಾರೆ.

ಮಧ್ಯಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ನಿರ್ಣಾಯಕ ಕ್ಷಣದಲ್ಲಿ ಶತಕ ಬಾರಿಸಿದ್ದಾರೆ.

ಬೌಲಿಂಗ್ ಸ್ನೇಹಿ ಪಿಚ್ ನಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಸರ್ಫರಾಜ್ 190 ಎಸೆತಗಳಲ್ಲಿ ಶತಕ ಗಳಿಸಿದರು.

ಮೊದಲ ದಿನದಾಟದ ಅಂತ್ಯಕ್ಕೆ 40 ರನ್ ಗಳಿಸಿ ಆಡುತ್ತಿದ್ದ ಸರ್ಫರಾಜ್ ಎರಡನೇ ದಿನದಾಟದಲ್ಲಿ 152 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರಾದರೂ ನಂತರದ 50 ರನ್ ಗಳು ಕೇವಲ 38 ಎಸೆತಗಳಲ್ಲಿ ದಾಖಲಾದವು.

ranji-trophy-2022-final-sarfaraz-khan-smashes-4th-century saaksha tv
ranji-trophy-2022-final-sarfaraz-khan-smashes-4th-century saaksha tv

ಸರ್ಫರಾಜ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಈ ಋತುವಿನಲ್ಲಿ ಈಗಾಗಲೇ 900 ರನ್ ಗಳಿಸಿರುವ ಸರ್ಫರಾಜ್ ಖಾನ್ 1,000 ರನ್ ಗಡಿಯನ್ನು ತಲುಪಲು ಕೆಲವೇ ದೂರದಲ್ಲಿದ್ದಾರೆ.

ನಿರ್ಣಾಯಕ ಘಟ್ಟದಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಸರ್ಫರಾಜ್ ಆಟಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ.  

248/5 ಸ್ಕೋರ್‌ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಮುಂಬೈ ಭೋಜನ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 351 ರನ್ ಗಳಿಸಿದೆ. ಸರ್ಫರಾಜ್ ಖಾನ್ 119, ತುಷಾರ್ ದೇಶಪಾಂಡೆ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮಧ್ಯಪ್ರದೇಶ ಬೌಲರ್‌ಗಳ ಪೈಕಿ ಅನುಭವ್ ಅಗರ್ವಾಲ್ 3 ವಿಕೆಟ್, ಸರನ್ಶ್ ಜೈನ್ 2 ಮತ್ತು ಗೌರವ್ ಯಾದವ್ 2 ವಿಕೆಟ್ ಪಡೆದಿದ್ದಾರೆ.ಕುಮಾರ್ ಕಾರ್ತಿಕೇಯ ಒಂದು ವಿಕೆಟ್ ಪಡೆದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd