ಐಪಿಎಲ್ 2021 | ಹೊಸ ತಂಡ ಖರೀದಿಸಲಿದ್ದಾರಂತೆ ದೀಪಿಕಾ-ರಣವೀರ್
14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬಿಸಿಸಿಐ 15ನೇ ಆವೃತ್ತಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಮುಂದಿನ ಬಾರಿಯ ಐಪಿಎಲ್ ನಲ್ಲಿ ಹೊಸ ತಂಡಗಳ ಸೇರ್ಪಡೆಯಾಗಲಿದೆ. ಇದು ಐಪಿಎಲ್ ಕ್ರೇಜ್ ಇನ್ನಷ್ಟು ಹೆಚ್ಚಿಸಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ಮುಂದಿನ ಬಾರಿ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಭಾಗಿಯಾಗಲಿದ್ದು, ತಂಡಗಳ ಹರಾಜಿಗಾಗಿ ಬಿಸಿಸಿಐ ಒಂದು ತಂಡದ ಬೆಲೆ 2 ಸಾವಿರ ರೂ. ಕೋಟಿ ನಿಗದಿ ಮಾಡಿದೆ. ಈ ಎರಡು ತಂಡಗಳ ಹರಾಜಿನ ಮೂಲಕ ಬರೋಬ್ಬರಿ ಐದು ಸಾವಿರ ಕೋಟಿ ಆದಾಯಗಳಿಸೋದು ಬಿಸಿಸಿಐನ ಪ್ಲಾನ್ ಆಗಿದೆ.
ಐಪಿಎಲ್ 2022ರ ಫ್ರಾಂಚೈಸಿಗಳ ರೇಸ್‍ನಲ್ಲಿ ಗುಜರಾತ್‍ನ ಅಹಮದಾಬಾದ್ ಮತ್ತು ಉತ್ತರ ಪ್ರದೇಶದ ಲಖನೌ ನಗರಗಳು ಮುಂಚೂಣಿಯಲ್ಲಿವೆ. ಈ ಎರಡು ಫ್ರಾಂಚೈಸಿ ಪಡೆಯಲು ದೇಶದ ಘಟಾನುಘಟಿ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸುತ್ತಿವೆ
ಇದೇ ತಿಂಗಳಿನಲ್ಲಿ ಹೊಸ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಹರಾಜಿನಲ್ಲಿ ಬಾಲಿವುಡ್ ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ದಂಪತಿ ಭಾಗಿಯಾಗಲಿದೆಯಂತೆ. ಈ ಸ್ಟಾರ್ ಕಪಲ್ ಐಪಿಎಲ್ ನಲ್ಲಿ ಹೊಸ ತಂಡವನ್ನು ಖರೀದಿಸಲು ಚಿಂತನೆ ನಡೆಸಿದೆ ಎಂದು ಬಾಲಿವುಡ್ ಮೂಲಗಳ ಮಾತು.
ಇನ್ನು ಈಗಾಗಲೇ ಬಾಲಿವುಡ್ ಸ್ಟಾರ್ ಗಳಾದ ಶಾರೂಖ್ ಖಾನ್, ಪ್ರೀತಿಜಿಂತಾ ತಮ್ಮದೇ ಯಾದ ತಂಡಗಳನ್ನು ಹೊಂದಿದ್ದಾರೆ.