ಮಡಿಕೇರಿ : 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ – ಗರ್ಭಿಣಿಯಾದ ನಂತರ ಬೆಳಕಿಗೆ ಬಂದ ಪ್ರಕರಣ
ಮಡಿಕೇರಿ : (16 ) 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಗಿರಿಜನ ಹಾಡಿಯ ಬಾಲಕಿಯ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿದ್ದು, ಸಂತ್ರಸ್ತೆ 6 ತಿಂಗಳ ಗರ್ಭಿಣಿಯಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 20 ವರ್ಷದ ಲೋಹಿತ್ ಎಂಬಾತ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದು, ಆತನನ್ನ ಪೊಲೀಸರು ಬಂಧಿಸಿದ್ಧಾರೆ. ಕೂಲಿ ಕಾರ್ಮಿಕರ ಮಗಳಾಗಿದ್ದ ಬಾಲಕಿಯ ನಡೆವಳಿಕೆಯನ್ನ ಗಮನಿಸಿ ಶಂಶಯಗೊಂಡಿದ್ದ ಆಶಾಕಾರ್ಯಕರ್ತೆಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಬಾಲಕಿ 6 ತಿಂಗಳ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಇನ್ನೂ ಈ ವಿಚಾರದ ಬಗ್ಗೆ ಸಂತ್ರಸ್ತೆಯ ತಾಯಿಯನ್ನ ವಿಚಾರಿಸಿದಾಗ ಮೊದಲೇ ಆಕೆಗೆ ಈ ಬಗ್ಗೆ ಗೊತ್ತಿತ್ತು ಎಂಬ ಸಂಗತಿ ಬಹಿರಂಗವಾಗಿದೆ. ಹೌದು ಸಂತ್ರಸ್ತೆಯ ತಾಯಿ ಹೇಳುವ ಪ್ರಕಾರ ಬಾಲಕಿಯನ್ನ ಆರೋಪಿ ಪ್ರೀತಿಸುತ್ತಿದ್ದನಂತೆ. ಅಲ್ದೇ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಅನೇಕ ಬಾರಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಆತನ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ನೈಟ್ ಶಿಫ್ಟ್ ಮುಗಿಸಿ ಕ್ಯಾಬ್ ಹತ್ತಿದ್ದ ಯುವತಿ ಮೇಲೆ ಚಾಲಕ ಸೇರಿ ಐವರಿಂದ ಗ್ಯಾಂಗ್ ರೇಪ್..!
ಅಪ್ಪನಿಗೆ ಮುದ್ದು ಮಗಳು ಅಂತ ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ..!