ನೈಟ್ ಶಿಫ್ಟ್ ಮುಗಿಸಿ ಕ್ಯಾಬ್ ಹತ್ತಿದ್ದ ಯುವತಿ ಮೇಲೆ ಚಾಲಕ ಸೇರಿ ಐವರಿಂದ ಗ್ಯಾಂಗ್ ರೇಪ್..!
ಹರಿಯಾಣ : ಯುವತಿಯೊಬ್ಬಳು ನೈಟ್ ಶಿಫ್ಟ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ತೆರಳುತ್ತಿದ್ದ ವೇಳೆ ಕ್ಯಾಬ್ ಡ್ರೈವರ್ ಸೇರಿ ಐವರು ಕಾಮುಕರು ಆಕೆಯನ್ನ ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಇಂತಹ ಹೇಯ ಘಟನೆ ಹರಿಯಾಣದಲ್ಲಿ ನಡೆದಿದೆ.
24 ವರ್ಷದ ಯುವತಿ ಬೆಳಗಿನಜಾವ 3 ಗಂಟೆಗೆ ಇಫ್ಕೋ ಚೌಕ್ ನಿಂದ ಕ್ಯಾಬ್ ಹತ್ತಿದ್ದಾಳೆ. ಈ ವೇಳೆ ಕಾಮುಕರು ಆಕೆಯನ್ನು ಅಪಹರಿಸಿ ಝಜ್ಜರ್ ನ ನಿರ್ಜನ ಪ್ರದೇಶದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಕ್ಯಾಬ್ ಝಜ್ಜರ್ ತಲುಪಿದಾಗ ಮೂವರು ಆರೋಪಿಗಳು ಮತ್ತಿಬ್ಬರನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಮೊದಲು ಮದ್ಯ ಸೇವಿಸಿದ ಆರೋಪಿಗಳು ಆಕೆಯನ್ನು ಕ್ಯಾಬ್ ನಲ್ಲಿ ಲಾಕ್ ಮಾಡಿದ್ದಾರೆ. ಬೆಳಗಿನವರೆಗೂ ಆಕೆಯ ಮೇಲೆ ಅತ್ಯಾಚಾರ ಎಸಗಿ ಫಾರೂಕ್ ನಗರ ಸಮೀಪ ಆಕೆಯನ್ನು ಎಸೆದು ಪರಾರಿಯಾಗಿದ್ದಾರೆ.
ಇನ್ನೂ ಯುವತಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಆಕೆಯನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಯುವತಿಯ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.