ಶಾಕಿಂಗ್ : 14 ಹಾಗೂ 9 ವರ್ಷದ ಬಾಲಕರಿಂದ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ..!
ತೆಲಂಗಾಣ : 6 ವರ್ಷದ ಬಾಲಕಿಯನ್ನ ಸಂಬಂಧಿಕರೇ ಆದ 14 ವರ್ಷ ಹಾಗೂ 9 ವರ್ಷದ ಬಾಲಕರು ಸೇರಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಕುಟುಂಬಸ್ಥರು ನೀಡಿನ ದೂರಿನ ಆಧಾರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಫೆಬ್ರವರಿ 24 ರಂದು ಬಾಲಕಿಯು ಮನೆಯ ಆವರಣದಲ್ಲಿ ಓಡಾಡುತ್ತಿದ್ದ ವೇಳೆ ಬಾಲಕರು ಆಕೆಯೊಂದಿಗೆ ತೆರಳಿದ್ದಾರೆ. ಬಳಿಕ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿ ದೌರ್ಜನ್ಯವೆಸಗಿದ್ದಾರೆ.
ಉತ್ತರ ಪ್ರದೇಶ : ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿಯ ಜೊತೆಗೆ ತಾಯಿಯ ಜೀವ ತೆಗೆದ..!
ಬಳಿಕ ಬಾಲಕಿ ಮನೆಯಲ್ಲಿ ತನ್ನ ಖಾಸಗಿ ಬಾಗಗಳಲ್ಲಿ ನೋವಿರುವುದಾಗಿ ತಂದೆ ತಾಯಿ ಬಳಿ ಹೇಳಿಕೊಂಡಿದ್ದು, ಪೋಷಕರು ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿರುವ ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ತಿಳಿಸಿದ್ದಾರೆ.
ಬಳಿಕ ಏನಾಗಿದೆ ಎಂಬ ವಿಚಾರವನ್ನ ಬಾಲಕಿ ವಿವಿರಿಸಿದ್ದಾಳೆ. ನಂತರ ಬಾಲಕಿಯ ಕುಟುಂಬದವರು ಆರೋಪಿ ಅಪ್ರಾಪ್ತ ಬಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಬಳಿಕ ಪೊಲೀಸರು ಬಾಲಕಿಯನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ. ಇನ್ನೂ ಅಪ್ರಾಪ್ತ ಬಾಲಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.