ಉತ್ತರ ಪ್ರದೇಶ : ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿಯ ಜೊತೆಗೆ ತಾಯಿಯ ಜೀವ ತೆಗೆದ..!
ಉತ್ತರ ಪ್ರದೇಶ : 19 ವರ್ಷದ ಯುವತಿಯೊಬ್ಬಳು ತನ್ನ ಮದುವೆಯ ಪ್ರಸ್ತಾಪ ತಿರಸ್ಕರಿಸಿದಳು ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ಆಕೆ ಜೊತೆಗೆ ಆಕೆ ತಾಯಿಯನ್ನ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಚಾಕುವಿನಿಂದ ಇರುದು ತಾಯಿ ಮಗಳ ಹತ್ಯೆಗೈದಿದ್ದಾನೆ. ಘಟನೆಯಲ್ಲಿ ಪಕ್ಕದ ಮನೆಯ ಮತ್ತೋರ್ವ ಮಹಿಳೆಯೂ ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಮಹಿಳೆಗೆ ಚಿಕಿತ್ಸೆ ನೀಡಲಾಗ್ತಿದೆ.
ಇನ್ನು ಕೊಲೆ ಮಾಡಿರುವ ಆರೋಪಿಯನ್ನು ಗೋವಿಂದ ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಕೊಲೆಯಾಗಿರುವ ಯುವತಿಯ ಗೆಳೆಯನಾಗಿದ್ದು, ಮದುವೆಯಗುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಎರಡೂ ಕುಟುಂಬದ ಮಧ್ಯೆ ಮನಸ್ತಾಪಗಳಿದ್ದು, ಯುವತಿಗೆ ಬೇರೆ ಕಡೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದರು. ಹೀಗಾಗಿಯೇ ಈತ ತಾಯಿ ಮಗಳನ್ನ ಕೊಲೆ ಮಾಡಿರೋದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.