ತವರಿನಲ್ಲಿ ಮಾತ್ರ ಮಿಂಚುವ “ಅಶ್ವಿನ್ ALL TIME GREAT ಅಲ್ಲ”
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 434 ವಿಕೆಟ್ ಪಡೆದ ಸಾಧನೆ ಮಾಡಿದರು.
ಆ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ದಾಖಲೆ ಮುರಿದರು. ಅಲ್ಲದೇ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾದರು.
ಹೀಗಾಗಿ ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ, ಅಶ್ವಿನ್ ಅವರನ್ನ ಹಾಡಿ ಹೊಗಳಿದರು. ನನ್ನ ದೃಷ್ಟಿಯಲ್ಲಿ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್. ತಂಡಕ್ಕೆ ಹಲವು ವಿಜಯಗಳನ್ನು ತಂದುಕೊಟ್ಟಿದ್ದಾರೆ ಎಂದಿದ್ದಾರೆ.
ಆದ್ರೆ ರೋಹಿತ್ ಶರ್ಮಾರ ಈ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಶೀದ್ ಲತೀಫ್ ಖಂಡಿಸಿದ್ದು, ಭಾರತೀಯ ಕ್ರಿಕೆಟ್ ನಲ್ಲಿ ಅಶ್ವಿನ್ ದಿಗ್ಗಜ ಬೌಲರ್ ಎಂದರೇ ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
“ಅಶ್ವಿನ್ ಶ್ರೇಷ್ಠ ಬೌಲರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಬೌಲಿಂಗ್ನಲ್ಲಿ ವೈವಿಧ್ಯತೆ ಇರುತ್ತದೆ. ವಿಶೇಷವಾಗಿ ತವರಿನ ಟೆಸ್ಟ್ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
ಹಾಗಾಗಿ ಅವರು ಭಾರತದ ಅತ್ಯುತ್ತಮ ಸ್ಪಿನ್ನರ್ ಎಂದು ಹೇಳಬಹುದು. ಆದರೆ, ನನ್ನ ಅಭಿಪ್ರಾಯದಲ್ಲಿ ಅನಿಲ್ ಕುಂಬ್ಳೆ ವಿದೇಶದಲ್ಲಿ ಶ್ರೇಷ್ಠ ಬೌಲರ್.
ಬಿಶನ್ ಸಿಂಗ್ ಬೇಡಿ ಕೂಡ ಅದ್ಭುತ ಬೌಲರ್. ಹಾಗಾಗಿ ರೋಹಿತ್ ಶರ್ಮಾ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಬಹುಶಃ ರೋಹಿತ್ ಬಾಯಿ ತಪ್ಪಿ ಹೇಳಿರಬಹುದು. ಇಲ್ಲದಿದ್ದರೆ, ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ರೀತಿ ಹೇಳಿಕೆ ನೀಡಿರಬಹುದು ಎಂದಿದ್ದಾರೆ.
rashid-latif-says-rohit-might-have-slip-tongue









