ಅಭಿಮಾನಿ ಜೊತೆ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ಮೆಚ್ಚುಗೆ – ವೀಡಿಯೋ ವೈರಲ್
1 min read
ಅಭಿಮಾನಿ ಜೊತೆ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ಮೆಚ್ಚುಗೆ – ವೀಡಿಯೋ ವೈರಲ್
ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್ ನಾಯಕಿಯರಲ್ಲಿ ಒಬ್ಬಳು. ಕಳೆದ ವರ್ಷ ತೆರೆಕಂಡು ಸಾಲು ಸಾಲು ಚಿತ್ರಗಳಿಂದ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪುಷ್ಪ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ ರಶ್ಮಿಕಾ . ಜೊತೆಗೆ ಬಾಲಿವುಡ್ ನ ‘ಮಿಸ್ಟರ್ ಮಜ್ನು’, ‘ಅನಿಮಲ್’ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ ತಮ್ಮ ಛಾಪು ಮೂಡಿಸಲು ತಯಾರಿ ನಡೆಸುತ್ತಿದ್ದಾರೆ.
ಅದೇನೇ ಇರಲಿ.. ಪುಷ್ಪಾ ಚಿತ್ರದ ಮೂಲಕ ಬಂದ ಸ್ಟಾರ್ ಪಟ್ಟದಿಂದ ಆಕೆ ಹೋದಲ್ಲೆಲ್ಲಾ ಅಭಿಮಾನಿಗಳು ಆಕೆಯ ಸುತ್ತ ಜಮಾಯಿಸಿ ಸೆಲ್ಫಿ ಕೇಳುವುದು ಮಾಮೂಲಿಯಾಗಿದೆ. ಇತ್ತೀಚೆಗೆ ರಶ್ಮಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ .. ರಶ್ಮಿಕಾ ಅಭಿಮಾನಿ ಜೊತೆ ನಡೆದುಕೊಂಡ ವರ್ತನೆಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆ ವೈರಲ್ ವಿಡಿಯೋದಲ್ಲಿ ರಶ್ಮಿಕಾ ಶೂಟಿಂಗ್ ಸ್ಪಾಟ್‌ನಲ್ಲಿದ್ದಾರೆ, ಅಲ್ಲಿಗೆ ಬಂದಿದ್ದ ಸಿನಿ ವರದಿಗಾರರ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಸೆಲ್ಫಿಗಾಗಿ ಈ ಸುಂದರಿಯತ್ತ ಧಾವಿಸಿದ್ದಾರೆ. ಇದನ್ನು ಗಮನಿಸಿದ ನಟಿಯ ಅಂಗರಕ್ಷಕ ಆತನನ್ನು ತಡೆಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ರಶ್ಮಿಕಾ ಸಿಬ್ಬಂದಿಗಳನ್ನ ತಡೆದು ಅಭಿಮಾನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸೆಲೆಬ್ರಿಟಿ ಛಾಯಾಗ್ರಾಹಕರೊಬ್ಬರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಹಲವು ನೆಟ್ಟಿಗರು ರಶ್ಮಿಯನ್ನು ಹೊಗಳಿ ಪ್ರತಿಕ್ರಿಯಿಸಿದ್ದಾರೆ. ‘ವೆರಿ ಸ್ವೀಟ್’, ‘ದಕ್ಷಿಣ ನಟರು ತುಂಬಾ ನೀಟ್. ಬಾಲಿವುಡ್ ನಟರಂತಲ್ಲ’. ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ರಶ್ಮಿಕಾ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪಾ ಚಿತ್ರದ ಎರಡನೇ ಭಾಗ, ತಮಿಳಿನಲ್ಲಿ ವಿಜಯ್ ಜೊತೆಗಿನ ಚಿತ್ರ, ಬಾಲಿವುಡ್‌ನಲ್ಲಿ ಮಿಸ್ಟರ್ ಮಜ್ನು, ಅನಿಮಲ್ ಮತ್ತು ಇತರ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.