Rashmika Mandanna | ವಿಜಯ್ ನೀನೇ ನನ್ನ ಸ್ಪೂರ್ತಿ
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ರೌಡಿ ಹೀರೋ ವಿಜಯ್ ದೇವರಕೊಂಡ, ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ ನಟಿಸಿರುವ ಪಾನ್ ಇಂಡಿಯಾ ಸಿನಿಮಾ ಲೈಗರ್. ಆಗಸ್ಟ್ 25 ರಂದು ಈ ಸಿನಿಮಾ ಪ್ರಪಂಚದಾದ್ಯಂತ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಹೀರೋ ವಿಜಯ್ ದೇವರಕೊಂಡಗೆ ಸಂಬಂಧಿಸಿದ ಫೋಟೋವೊಂದನ್ನು ರಿಲೀಸ್ ಮಾಡಿದ್ದಾರೆ. ಅದರಲ್ಲಿ ವಿಜಯ್ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ದೇಹದ ಮೇಲೆ ಒಂದೇ ಒಂದು ನೂಲು ಇಲ್ಲದೇ ಪುಷ್ಪಗುಚ್ಛವನ್ನ ಅಡ್ಡವಾಗಿಟ್ಟುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಈ ಪೋಸ್ಟರ್ ಗೆ ನಟಿ ರಷ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದು, ಇನ್ ಸ್ಟಾದಲ್ಲಿ ಈ ಪೋಸ್ಟರ್ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೂ ನನ್ನನ್ನ ಯಾರಾದ್ರೂ ನಿನ್ನ ಸ್ಪೂರ್ತಿ ಯಾರು ಎಂದು ಕೇಳಿದ್ರೆ ಯಾರ ಹೆಸರು ಹೇಳಬೇಕೋ ಅರ್ಥವಾಗುತ್ತಿರಲಿಲ್ಲ. ಆದ್ರೆ ಇನ್ಮುಂದೆ ಯಾರಾದ್ರೂ ಆ ಪ್ರಶ್ನೆ ಕೇಳಿದ್ರೆ ನಿನ್ನ ಹೆಸರೇ ಉತ್ತರವಾಗಿ ಹೇಳುತ್ತೇನೆ. ಲೈಗರ್ ನಿಮಗೆ ನಮ್ಮ ಪ್ರೀತಿ, ಬೆಂಬಲ ಸದಾ ಇರುತ್ತದೆ. ನೀನು ಏನು ಮಾಡಬಹುದು ಎಂಬೋದನ್ನ ಪ್ರಪಂಚಕ್ಕೆ ತೋರಿಸು ಅಂತಾ ಬರೆದುಕೊಂಡಿದ್ದಾರೆ.
ಇದಕ್ಕೆ ವಿಜಯ್ ಕೂಡ ಸ್ಪಂದಿಸಿದ್ದು, ರುಷಿ… ಗೀತಾಗೊಂವಿದಂ ಸಿನಿಮಾದಿಂದ ನೀನೇ ನನ್ನ ಸ್ಪೋರ್ತಿ ಎಂದು ಬರೆದುಕೊಂಡಿದ್ದಾರೆ.