‘ಕಿರಿಕ್ ಪಾರ್ಟಿ’ ಹಿಂದಿ ರಿಮೇಕ್ ನಲ್ಲಿ ನಟಿಸಲ್ವಂತೆ ‘ಚಷ್ಮಾ ಸುಂದರಿ’..!
ಮೊದಲ ಸಿನಿಮಾ ಮೂಲಕವೇ ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡು ಟಾಲಿವುಡ್ ಬಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣಗೆ ಫೇಮ್ ತಂದುಕೊಟ್ಟ ಸಿನಿಮಾ ಅಂದ್ರೆ ಅದು 2016 ರಲ್ಲಿ ರಿಲೀಸ್ ಆದ ಕಿರಿಕ್ ಪಾರ್ಟಿ.
ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಅದ್ರಲ್ಲೂ ಸಾನವಿಯಾಗಿ ಮಿಂಚಿದ ರಶ್ಮಿಕಾ ಪಾತ್ರ ಎಲ್ಲರನ್ನೂ ಮೋಡಿ ಮಾಡಿತ್ತು.. ಈ ಪಾತ್ರದಿಂದ ರಶ್ಮಿಕಾ ಅದೃಷ್ಟ ಖುಲಾಯಿಸಿ ಪರಭಾಷೆಗಳಲ್ಲಿ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ್ರು..
ಈ ಸಿನಿಮಾ ತೆಲುಗಿನಲ್ಲೂ ರೀಮೇಕ್ ಆಗಿ ಹಿಟ್ ಆಯ್ತು. ಇದೀಗ ಇದೇ ಸಿನಿಮಾ ಹಿಂದಿಗೆ ರೀಮೇಕ್ ಆಗಬಹುದಾ.. ಆದ್ರೆ ಈ ಸಿನಿಮಾದಲ್ಲಿ ರಷ್ಮಿಕಾ ಅವರೇ ನಟಿಸಬಹುದಾ ಎಂಬ ಚರ್ಚೆಗಳು ನಡೆಯುತ್ತಿವೆ. ಆದ್ರೆ ಇದಕ್ಕೆ ಉತ್ತರಿಸಿರುವ ಚಷ್ಮಾ ಸುಂದರಿ ರಶ್ಮಿಕಾ ನಾನು ಕಿರಿಕ್ ಪಾರ್ಟಿ ರಿಮೇಕ್ ನಲ್ಲಿ ಖಂಡಿತಾ ನಟಿಸುವುದಿಲ್ಲ ಎಂದಿದ್ಧಾರೆ.
ಹೌದು.. ಒಂದು ಬಾರಿ ನಾನು ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಅನುಭವವನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದರಲ್ಲಿಯೇ ನಟಿಸಿದರೆ ಹೊಸತನ ನೀಡಲು ಸಾಧ್ಯವಿಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವ ಪಡೆಯುವ ಅವಕಾಶ ಇರುವಾಗ ಮತ್ತೆ ನಾನೇಕೆ ಹಳೇ ಪಾತ್ರದಲ್ಲಿ ನಟಿಸಲಿ. ಒಮ್ಮೆ ಆ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ನಾನು ಮುಂದುವರಿಯುತ್ತೇನೆ. ನಾನು ನನ್ನದೇ ಸಿನಿಮಾಗಳ ರಿಮೇಕ್ ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.