ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಈಗ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಪುಷ್ಪ 2 , ತಮಿಳಿನಲ್ಲಿ ವಿಜಯ್ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..
ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಲವ್ ಲೈಫ್ ವಿಚಾರವಾಗೂ ಗಾಸಿಪ್ ಆಗ್ತಲೇ ಇರುರತ್ತಾರೆ.. ಅದ್ರಲ್ಲೂ ಗೀತಾ ಗೋವಿಂದಂ ಕೋ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಗೆ ಲವ್ವಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡ್ತಲೇ ಇರುತ್ತೆ.. ಗಾಸಿಪ್ ಗೆ ಪುಷ್ಠಿ ಎಂಬಂತೆ ಇಬ್ಬರೂ ಒಟ್ಟಾಗಿ ಹೋಟೆಲ್ , ಜಿಮ್ ಹೊರಗೆ ಹೀಗೆ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಆದ್ರೆ ಇತ್ತೀಚೆಗೆ ರಶ್ಮಿಕಾ ವಿಜಯ್ ದೇರಕೊಂಡ ಮೇಲೆ ಮುನಿಸಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ… ಇನ್ನೂವರೆಗೂ ಇಬ್ಬರ ನಡುವಿನ ಮುನಿಸು ಹಾಗೆ ಇದೆ ಎನ್ನಲಾಗ್ತಿದ್ದು , ಇದೀಗ ಸಾರಾ ಅಲಿ ಖಾನ್ ಜೊತೆಗೆ ದೇವರಕೊಂಡ ಡೇಟಿಂಗ್ ಸುದ್ದಿ ಸಂಚಲನ ಸೃಷ್ಟಿಸಿದೆ.. ಈ ಹೊತತ್ತಲ್ಲೇ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಟ್ರೋಲಿಗರ ಪಾಲಿಗೆ ಆಹಾರ ಆಗಿದ್ದಾರೆ,…
ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ಸಾರಾ ಅಲಿಖಾನ್ ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮತ್ತು ಸಾರಾ ಆಲಿಖಾನ್ ಬಗ್ಗೆ ಡೇಟಿಂಗ್ ಅನುಮಾನಗಳು ಹುಟ್ಟಿಕೊಂಡಿವೆ..