ತುಂಡು ಬಟ್ಟೆ ಧರಿಸಿದ ರಶ್ಮಿಕಾ… ಮತ್ತೆ ಟಾರ್ಗೆಟ್ ಆಗ್ತಾರಾ..?
ಕಡಿಮೆ ಅವಧಿಯಲ್ಲಿ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದ ನಟಿ ರಷ್ಮಿಕಾ ಮಂದಣ್ಣ.
ಪ್ರಸ್ತುತ ಸತತ ಸಿನಿಮಾಗಳ ಮೂಲಕ ಬ್ಯೂಸಿಯಾಗಿರುವ ರಶ್ಮಿಕಾ ಸದ್ಯ ಹಿಂದಿಯಲ್ಲಿ ನಟಿಸುತ್ತಿದ್ದಾರೆ.
ಅವರು ನಟಿಸಿರುವ ಸಿದ್ದಾರ್ಥ್ ಮಲ್ಹೋಥ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಗುಡ್ ಬೈ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.
ಸಿನಿಮಾ ಮಾತ್ರವಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ, ಆಗಾಗ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತಾ ಟ್ರೆಂಡ್ ಆಗುತ್ತಲೇ ಇರುತ್ತಾರೆ.
ಈ ಹಿಂದೆ ತುಂಡು ಬಟ್ಟೆಗಳನ್ನು ಧರಿಸಿ ಇರಿಸು ಮುರಿಸು ಅನುಭವಿಸಿದ್ದ ನಟಿ, ಇದೀಗ ಮತ್ತೊಮ್ಮೆ ಶಾರ್ಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಮುಂಬೈ ನಲ್ಲಿ ಒಂದು ಪ್ರಶಸ್ತಿ ಕಾರ್ಯಕ್ರಮಕ್ಕೆ ರಶ್ಮಿಕಾ ಹಾಜರಾಗಿದ್ದರು.
ಈ ಕಾರ್ಯಕ್ರಮದಲ್ಲಿ ರೆಡ್ ಕಲ್ಲರ್ ಡ್ರೆಸ್ ನಲ್ಲಿ ರಶ್ಮಿಕಾ ಎಲ್ಲರನ್ನೂ ತನ್ನತ್ತ ಸೆಳೆದಿದ್ದರು.
ಇದರಿಂದ ಅಲ್ಲಿ ನೆರೆದಿದ್ದವರು ಆಕೆಯನ್ನ ಸೋಪಾ ಮೇಲೆ ಕೂರಿಸಿ ಫೋಟೋ ಕ್ಲಿಕ್ಕಿಸಿದ್ರು.
ಇದರಿಂದ ರಶ್ಮಿಕಾ ಮೇಲ್ನೋಟಕ್ಕೆ ನಗುತ್ತಿದ್ದರೂ ಕೊಂಚ ಇರುಸು ಮುರಿಸು ಅನುಭವಿಸಿದ್ರು.
ಯಾಕಂದರೇ ಆಕೆಯ ಡ್ರೆಸ್ ಮೊಣಕಾಲಿಗಿಂತ ಮೇಲಿತ್ತು.
ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.