ಪಡಿತರ ಕಾರ್ಡ್ದಾರರಿಗೆ ಆಹಾರ ಇಲಾಖೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಕಾಯುತ್ತಿದ್ದರೋ ಅಂತವರಿಗೆ ಪಡಿತರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ನಿನ್ನೆಯಿಂದ ಅವಕಾಶ ನೀಡಿದೆ.
ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ್ದರೂ ಸಹ, ಆ ವೇಳೆ ಸರ್ವಸ್ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. 53 ಸಾವಿರ ಅರ್ಜಿಗಳು ಪಡಿತರ ಕಾರ್ಡ್ ತಿದ್ದುಪಡಿಗೆ ಸಲ್ಲಿಕೆ ಆಗಿದ್ದವು. ಅರ್ಜಿ ಹಾಕಿ 15 ದಿನ ಆಯ್ತು ಅರ್ಜಿಯ ಸ್ಥಿತಿ (ಸ್ಟೇಟಸ್) ಏನಿದೆ? ಎಂಬುವುದನ್ನು ನಿಮ್ಮ ಮೊಬೈಲ್, ಕಂಪ್ಯೂಟರ್ನಲ್ಲೇ ಪರಿಶೀಲನೆ ಮಾಡಿಕೊಳ್ಳಬಹುದು. ಇದಕ್ಕೆ ನೀವು ಆಹಾರ ಇಲಾಖೆ ವೆಬ್ ಸೈಟ್ www.ahara.kar.in ಗೆ ಭೇಟಿ ನೀಡಬೇಕು.
ಇ-ಸ್ಥಿತಿ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮಗೆ ಮೂರು ಆಯ್ಕೆ ಅಂದರೆ ಹೊಸ/ಹಾಲಿ ಪಡಿತರ ಚೀಟಿ ಸ್ಥಿತಿ, ತಿದ್ದುಪಡಿ ವಿನಂತಿ ಸ್ಥಿತಿ ಮತ್ತು ಡಿಬಿಬಿ ಸ್ಥಿತಿ ಎಂಬ ಆಯ್ಕೆಗಳನ್ನು ಕಾಣುತ್ತವೆ. ಅಲ್ಲಿ ಹೋಗಿ ತಿದ್ದುಪಡಿ ವಿನಂತಿ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆ ನಂತರ ಜಿಲ್ಲೆಯ ವಲಯದ ಮೇಲೆ ಕ್ಲಿಕ್ ಮಾಡಬೇಕು.
ಆಗ ಹೊಸ ಪೇಜ್ ತೆರೆದುಕೊಳ್ಳುತ್ತದೆ. ‘ಪಡಿತರ ಚೀಟಿ ಬದಲಾವಣೆ ಕೋರಿಗೆ ಸ್ಥಿತಿ’ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ನೀವು ನಿಮ್ಮ ಆರ್ಸಿ ನಂಬರ್, ಅಂದರೆ ಪಡಿತರ ಚೀಟಿ ಸಂಖ್ಯೆಯನ್ನು ನಮೂದು ಮಾಡಿ, ನೀವು ತಿದ್ದುಪಡಿ ವೇಳೆ ಕೊಟ್ಟಿರುವ Akcnowledgment No ನಮೂದು ಮಾಡಿ ಬಳಿಕ Go ಅಂತ ಆಯ್ಕೆ ಮಾಡಿದರೆ ನಿಮ್ಮ ಅರ್ಜಿಯ ಸ್ಟೇಟಸ್ ಬಗ್ಗೆ ನಿಮಗೆ ಗೊತ್ತಾಗುತ್ತದೆ.
ಎರಡು ಬಾಕ್ಸ್ಗಳಲ್ಲಿ ಸರಿಯಾದ ನಂಬರ್ಗಳನ್ನು ನಮೂದು ಮಾಡಿ Go ಅಂತ ಕ್ಲಿಕ್ ಮಾಡಿದರೆ, ನೀವು ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ ದಿನಾಂಕ, ನಿಮ್ಮ ಅರ್ಜಿ ಇಲಾಖೆ ಅರ್ಜಿಯನ್ನು ಯಾವಾಗ ಓಕೆ ಮಾಡಿದೆ ಹಾಗೂ ಸ್ಟೇಟಸ್ ಏನಿದೆ ಎಂಬ ಮಾಹಿತಿ ಸಿಗುತ್ತದೆ.