ಭಾರತದ ಯಶಸ್ವಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ತಂದೆ ಇತ್ತೀಚೆಗಷ್ಟೇ ಸೊಸೆಯ ವಿರುದ್ಧ ಆರೋಪ ಮಾಡಿದ್ದರು. ಇದರ ಮಧ್ಯೆ ರವೀಂದ್ರ ಜಡೇಜಾ ಪತ್ನಿಗೆ ವಿಶೇಷ ಪ್ರಶಸ್ತಿ ಅರ್ಪಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯ ಗೆದ್ದಿರುವ ಭಾರತದ ಪರ ಉತ್ತಮ ಪ್ರದರ್ಶನ ತೋರಿದ್ದ ಆಲ್ ರೌಂಡರ್ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ತಕ್ಷಣ, ಅದನ್ನು ತಮ್ಮ ಪತ್ನಿ ರಿವಾಬ ಅವರಿಗೆ ಅರ್ಪಿಸಿದ್ದಾರೆ.
ಹೆಂಡತಿಯ ಮಾತುಗಳನ್ನು ಕೇಳಿ ನನ್ನ ಮಗ ನನ್ನಿಂದ ದೂರವಿದ್ದಾನೆ ಎಂದು ಜಡೇಜಾ ತಂದೆ, ಅನಿರುದ್ಧ್ ಸಿಂಗ್ ಜಡೇಜಾ ಆರೋಪಿಸಿದ್ದರು. ಈ ವೇಳೆ ಹೆಂಡತಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿರುವ ಜಡೇಜಾ, ಮಡದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 112 ರನ್ ಸಿಡಿಸಿದ್ದ ಜಡೇಜಾ, ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಹಾಗೂ ಒಟ್ಟಾರೆ ಮೂರನೇ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ರವಿಚಂದ್ರನ್ ಅಶ್ವಿನ್ ನಂತರ ಟೆಸ್ಟ್ನಲ್ಲಿ ಶತಕ ಮತ್ತು ಐದು ವಿಕೆಟ್ಗಳನ್ನು ಪಡೆದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.