RBI ನ 4ನೇ ಉಪ ಗವರ್ನರ್ ಆಗಿ ಟಿ. ರಬಿ ಶಂಕರ್ ನೇಮಕ
ನವದೆಹಲಿ: RBI ನ 4ನೇ ಉಪ ಗವರ್ನರ್ ಆಗಿ ಟಿ. ರಬಿ ಶಂಕರ್ ಅವರು ನೇಮಕಗೊಂಡಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಟಿ. ರಬಿ ಶಂಕರ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉಪ ಗವರ್ನರ್ ಹುದ್ದೆಗೆ ನೇಮಕ ಮಾಡಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ರಬಿ ಶಂಕರ್ ಅವರು ಮಾಹಿತಿ ತಂತ್ರಜ್ಞಾನ, ಬಂಡವಾಳ ಫಿನ್ಟೆಕ್, ಪಾವತಿ ವ್ಯವಸ್ಥೆ ಮತ್ತು ಅಪಾಯದ ಮೇಲ್ವಿಚಾರಣೆಯ ಕಾರ್ಯ ನಿರ್ವಹಿಸಲಿದ್ದಾರೆ. ಒಂದು ವರ್ಷದ ವಿಸ್ತರಣೆಯ ಅವಧಿಯನ್ನು ಪೂರೈಸಿದ ನಂತರ ಕಳೆದ ತಿಂಗಳು ನಿವೃತ್ತರಾದ ಬಿಪಿ ಕನುಂಗೊ ಅವರ ಸ್ಥಾನದಲ್ಲಿ ಶಂಕರ್ ಕೆಲಸ ಮಾಡಲಿದ್ದಾರೆ.