RBI CBDC Digital Rupee : ದೇಶದಲ್ಲೇ ಪ್ರಥಮ ಬಾರಿಗೆ ಡಿಜಿಟಲ್ ರೂಪಾಯಿ… ಇಂದಿನಿಂದ ಚಲಾವಣೆ…
ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನಿಂದ ಡಿಜಿಟಲ್ ರೂಪಾಯಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಡಿಜಿಟಲ್ ರೂಪಾಯಿ ಅಥವಾ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ಚಲಾವಣೆಗೆ ಬಂದಿದೆ.
ಖಾಸಗಿ ಡಿಜಿಟಲ್ ಹಣ ಅಥವಾ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋ- ಕರೆನ್ಸಿಗಳಿಗೆ ಅನುಮತಿಸುವುದು ದೇಶದ ಹಣಕಾಸು ಸ್ಥಿತಿಯನ್ನ ಅಪಾಯಕ್ಕೆ ತಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಹಿಂದಿನಿಂದಲೂ ಅಚಲವಾಗಿ ನಂಬಿತ್ತು ಇದಕ್ಕೆ ಬದಲಾಗಿ RBI ಸ್ವತಃ ಡಿಜಿಟಲ್ ರುಪಾಯಿಯನ್ನ ಬಿಡುಗಡೆ ಮಾಡಿದೆ.
ಆರ್‌ಬಿಐ ಸಗಟು ಡಿಜಿಟಲ್ ರೂಪಾಯಿಯನ್ನ ಪ್ರಾಯೋಗಿಕ ಆಧಾರದ ಮೇಲೆ ನವೆಂಬರ್ 1, 2022 ರಿಂದ ಮಂಗಳವಾರ ಪರಿಚಯಿಸಿತ್ತು. ಪ್ರಾಯೋಗಿಕ ಅವಧಿಯಲ್ಲಿ, ಸಗಟು ಡಿಜಿಟಲ್ ರೂಪಾಯಿಯನ್ನು ಸರ್ಕಾರಿ ಭದ್ರತೆಗಳಲ್ಲಿನ ದ್ವಿತೀಯ ಮಾರುಕಟ್ಟೆ ವಹಿವಾಟುಗಳ ಇತ್ಯರ್ಥಕ್ಕಾಗಿ ಬಳಸಲಾಗುತ್ತದೆ.
ಮೊದಲ ಹಂತದಲ್ಲಿ, ಕೇಂದ್ರ ಬ್ಯಾಂಕ್ ಸಗಟು ಇ-ರೂಪಾಯಿ ಪೈಲಟ್ ಯೋಜನೆಯಲ್ಲಿ ಭಾಗವಹಿಸಲು 9 ಬ್ಯಾಂಕ್‌ಗಳನ್ನ ಅನುಮೋದಿಸಲಾಸಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಚ್‌ಎಸ್‌ಬಿಸಿ ಗಳಿಗೆ ಅನುಮತಿ ನೀಡಿದೆ.
ಸಗಟು ಡಿಜಿಟಲ್ ರೂಪಾಯಿ ಬಳಕೆಯಿಂದ ‘ಇಂಟರ್-ಬ್ಯಾಂಕಿಂಗ್ ಮಾರುಕಟ್ಟೆ’ಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಿರೀಕ್ಷಿಸುವುದಾಗಿ ಆರ್‌ಬಿಐ ಹೇಳಿಕೆ ನೀಡಿದೆ. ಪ್ರಾಯೋಗಿಕ ಯೋಜನೆಯ ಹಂತದಲ್ಲಿ, ಪ್ರತಿ ಬ್ಯಾಂಕಿನ CBDC ಖಾತೆಗೆ CBDC ಅನ್ನು ಕೇಂದ್ರ ಬ್ಯಾಂಕ್ ವ್ಯವಸ್ಥಿತವಾಗಿ ನೀಡಲಾಗುತ್ತದೆ. ಆಯಾ ಬ್ಯಾಂಕ್‌ಗಳಿಂದ ಬೇಡಿಕೆಯ ಮೇರೆಗೆ CBDC ಅನ್ನು ಸಹ ನೀಡಲಾಗುತ್ತದೆ
ದೇಶೀಯ ಪ್ರಾಯೋಗಿಕ ಯೋಜನೆಯ ಫಲಿತಾಂಶಗಳ ಆಧಾರದ ಮೇಲೆ, ಡಿಜಿಟಲ್ ರೂಪಾಯಿ ವಹಿವಾಟಿನ ವ್ಯಾಪ್ತಿಯನ್ನು ಇತರ ಸಗಟು ವಹಿವಾಟುಗಳು ಮತ್ತು ವಿದೇಶಿ ಪಾವತಿಗಳಿಗೆ ವಿಸ್ತರಿಸಲಾಗುವುದು. ಚಿಲ್ಲರೆ ಆವೃತ್ತಿಯ ಪ್ರಾಯೋಗಿಕ ಯೋಜನೆಯನ್ನು ಸಹ ಒಂದು ತಿಂಗಳೊಳಗೆ ಪ್ರಾರಂಭಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
RBI CBDC Digital Rupee : Digital Rupee for the first time in the country… from today…








