RCBಗೆ ಪ್ಲೇ ಆಫ್ಸ್ ಹೋಗುವ ಧಮ್ ಇಲ್ವಾ..?
1 min read
ipl-2022-rcb qualify for playoffs 2022 saaksha tv
RCBಗೆ ಪ್ಲೇ ಆಫ್ಸ್ ಹೋಗುವ ಧಮ್ ಇಲ್ವಾ..?
ಐಪಿಎಲ್ 2022 ರ ಋತುವಿನಲ್ಲಿ RCB ಮತ್ತೊಂದು ಸೋಲನ್ನು ಅನುಭವಿಸಿದೆ. ಪ್ಲೇ ಆಫ್ಸ್ ಗೆ ಹತ್ತಿರವಿರುವ ಈ ಸಂದರ್ಭದಲ್ಲಿಯೇ ಪಂಜಾಬ್ ಕಿಂಗ್ಸ್ ವಿರುದ್ಧ ಬೆಂಗಳೂರು 54 ರನ್ ಗಳಿಂದ ಸೋಲು ಕಂಡಿದೆ. ಹೀಗಾಗಿ ಆರ್ ಸಿಬಿಯ ಪ್ಲೇ ಆಫ್ಸ್ ಚಾನ್ಸ್ ಮತ್ತಷ್ಟು ಕ್ಲಿಷ್ಟಕರವಾಗಿದೆ. ಪಂಜಾಬ್ ಭಾರಿ ಮೊತ್ತದ ಎದುರು ಬೆಂಗಳೂರು ಕನಿಷ್ಠ ಹೋರಾಟ ಮಾಡಲಿಲ್ಲ. ಹಾಗಾದ್ರೆ ಆರ್ ಸಿಬಿ ತಂಡದ ಪ್ಲೇ ಆಫ್ಸ್ ಚಾನ್ಸ್ ಹೇಗಿದೆ..? RCB ಪ್ಲೇಆಫ್ ತಲುಪಲು ತಮ್ಮ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಗುಜರಾತ್ ಟೈಟಾನ್ಸ್ ವಿರುದ್ಧ ಸೋತರೇ ಆರ್ ಸಿಬಿ ಮತ್ತೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಸ್ತುತ 13 ಪಂದ್ಯಗಳನ್ನಾಡಿದೆ. ಇದರಲ್ಲಿ ಆರು ಪಂದ್ಯಗಳಲ್ಲಿ ಸೋಲು ಕಂಡಿದೆ. ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ 14 ಅಂಕ ಪಡೆದು ಬೆಂಗಳೂರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಜತೆಗೆ ಆರ್ಸಿಬಿ ನಿವ್ವಳ ದರವೂ ಮೈನಸ್ ಆಗಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ..ಬೆಂಗಳೂರು ತಂಡ 16 ಅಂಕಗಳೊಂದಿಗೆ ಪ್ಲೇಆಫ್ ಸೇರುವ ಅವಕಾಶ ಇದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಬೆಂಗಳೂರು ತಂಡಕ್ಕೆ ಡು ಆರ್ ಡೈ ಪಂದ್ಯವಾಗಿದೆ.

ಅಂದಹಾಗೆ ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಬಹುತೇಕ ಪ್ಲೇ ಆಫ್ಸ್ ತಲುಪಿವೆ. ಇನ್ನು ಮೂರನೇ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ಇದ್ದು, ನಾಲ್ಕನೇ ಸ್ಥಾನಕ್ಕಾಗಿ ಈಗ ಜಿದ್ದಾಜಿದ್ದಿ ಹೋರಾಟ ನಡೆಯುತ್ತಿದೆ. ಅದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪ್ಲಸ್ ರನ್ ರೇಟ್ ಹೊಂದಿವೆ. ಒಂದು ವೇಳೆ ಪಂಜಾಬ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಯಾವುದಾದರೂ ಒಂದು ತಂಡ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದರೇ ಆರ್ ಸಿಬಿ ಕಥೆ ಗೋವಿಂದಾ ಆಗಲಿದೆ.
ಹಾಗಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೊನೆಯ ಕಾದಾಟದಲ್ಲಿ ಗೆದ್ದು ಪ್ಲೇ ಆಫ್ಸ್ ತಲುಪುತ್ತಾ..? ಅಥವಾ ಮತ್ತೆ ನಿರಾಸೆ ಅನುಭವಿಸಿ ಮನೆಯತ್ತ ಹೋಗುತ್ತಾ ಎನ್ನುವುದನ್ನ ಕಾದು ನೋಡಬೇಕು.
ಪಂದ್ಯದ ಸೋಲಿನ ನಂತರ ಆರ್ಸಿಬಿ ನಾಯಕ ಡುಪ್ಲೆಸಿಸ್ ಕೊಹ್ಲಿ ಕೆಟ್ಟ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಕೊಹ್ಲಿಗೆ ನನ್ನ ಬೆಂಬಲವಿದೆ. ಆತ ಕೆಟ್ಟ ಟೈಮ್ ನಲ್ಲಿರೋದು ನಿಜ, ಆದ್ರೆ ಆತನಿಗೋಸ್ಕರ ದೊಡ್ಡ ಇನ್ನಿಂಗ್ಸ್ ಕಾಯುತ್ತಿದೆ. ಅದನ್ನು ವಿರಾಟ್ ಕೊಹ್ಲಿ ಪಡೆಯುತ್ತಾನೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಸುಲಭವಾದ ಆಟವಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಟೈಮ್ ಕೈ ಕೊಡುತ್ತಿದೆ. ಇದು ಆಟದಲ್ಲಿ ಈ ರೀತಿ ನಡೆಯುವುದು ಸಹಜ. ಏನಾದ್ರೂ ಸರಿ ಪಾಸಿಟಿವ್ ಆಗಿ ಕಷ್ಟಪಟ್ಟರೇ ಫಲಿತಾಂಶ ಕಟ್ಟಿಟ್ಟಬುತ್ತಿ ಎಂದಿದ್ದಾರೆ ಫಾಫ್ rcb-captain-faf-du-plessis-makes-big-statement-virat-kohli-form