ಆರ್ ಸಿಬಿ.. ಸಿಎಸ್ ಕೆ.. ಯಾವ ತಂಡಕ್ಕೆ ಕ್ರೇಜ್ ಹೆಚ್ಚು..?

1 min read
RCB

ಆರ್ ಸಿಬಿ.. ಸಿಎಸ್ ಕೆ.. ಯಾವ ತಂಡಕ್ಕೆ ಕ್ರೇಜ್ ಹೆಚ್ಚು..?

ಆರ್ ಸಿಬಿ..! ಇದು ಕೇವಲ ಒಂದು ಕ್ರಿಕೆಟ್ ತಂಡವಲ್ಲ.. ಕೋಟ್ಯಾಂತರ ಅಭಿಮಾನಿಗಳ ಎಮೋಷನ್. ತಂಡ ಗೆಲ್ಲುತ್ತೊ ಸೋಲುತ್ತೋ ನಾವ್ ಮಾತ್ರ ಪಕ್ಕಾ ಆರ್ ಸಿಬಿಯನ್ಸ್ ಅಂತಾ ಕಾಲರ್ ಎತ್ತುಕೊಂಡು ಓಡಾಡೋ ಅಭಿಮಾನಿಗಳು ಇಡೀ ಕ್ರಿಕೆಟ್ ವಿಶ್ವದಲ್ಲಿ ಬೇರೆ ಯಾವುದೇ ತಂಡಕ್ಕೆ ಇಲ್ಲ ಅಂದ್ರೆ ತಪ್ಪಾಗಲ್ಲ. ಚಟ್ಟ ಹೇರೊವರೆಗೂ ನಾನ್ ಪಕ್ಕಾ ಆರ್ ಸಿಬಿಯನ್ ಅನ್ನೋ ಫ್ಯಾನ್ಸ್ ಇರುವ ಏಕೈಕ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಯಾಕೆಂದ್ರೆ ಆರ್ ಸಿಬಿ ಅಭಿಮಾನಿಗಳದ್ದು ನೆಕ್ಸ್ಟ್ ಲೆವೆಲ್ ಅಭಿಮಾನ. ಅದಕ್ಕೆ ಯಾರು ಬೆಲೆ ಕಟ್ಟೋಕೆ ಆಗಲ್ಲ.

ಆರ್ ಸಿಬಿ ಗೆದ್ದರೂ ಸೋತರೂ ಅದಕ್ಕಿರುವ ಕ್ರೇಜ್ ಮಾತ್ರ ಕಡಿಮೆ ಆಗೋದೆ ಇಲ್ಲ. ಆರ್ ಸಿಬಿ ಪಂದ್ಯ ಅಂದ್ರೆ ಅವತ್ತು ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಟ್ವಿಟ್ಟರ್ ನಲ್ಲಿ ಈ ಸಲ ಕಪ್ ನಮ್ದೆ ಟ್ರೆಂಡ್ ಆಗುತ್ತೆ. ಫೇಸ್ ಬುಕ್ ನಲ್ಲಿ ತಂಡದ ಪೋಸ್ಟರ್ ಗಳು ರಾರಾಜಿಸುತ್ವೆ. ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಗಳು ಶೈನ್ ಆಗುತ್ವೆ. ಒಟ್ಟಾರೆ ಸೋಶಿಯಲ್ ಮೀಡಿಯಾಗೆ ಬೆಂಕಿ ಬೀಳುತ್ತೆ. ಇದು ಆರ್ ಸಿಬಿಗೆ ಇರೋ ಗತ್ತು ಘಮ್ಮತ್ತು..!

ಆರ್ ಸಿಬಿಯನ್ನ ಹೊರತುಪಡಿಸಿ ಐಪಿಎಲ್ ನಲ್ಲಿ ಆ ಮಟ್ಟಿಗೆ ಕ್ರೇಜ್ ಪಡೆದುಕೊಂಡಿರುವ ತಂಡ ಅಂದ್ರೆ ಅದು ಚೆನ್ನೈ ಸೂಪರ್ ಕಿಂಗ್ಸ್..! ಧೋನಿ ನಾಯಕತ್ವದ ಚೆನ್ನೈ ತಂಡಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

rcb-csk-most-popular-teams saaksha tv

ದೇಶ ವಿದೇಶಗಳಲ್ಲಿಯೂ ಯೆಲ್ಲೋ ಬ್ರಿಗೇಡ್ ಗೆ ವಿಶ್ ಮಾಡೋರಿದ್ದಾರೆ. ಹೀಗಾಗಿಯೇ ಈ ಎರಡೂ ತಂಡಗಳು  ಇದೀಗ ವಿಶ್ವ ಮಟ್ಟದಲ್ಲಿ ಅಪರೂಪದ ಘನತೆಯನ್ನು ಸಾಧಿಸಿದೆ. ವಿಶ್ವಾದ್ಯಂತ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಎಂಗೇಜ್ಮೆಂಟ್ಸ್ ಅಂದರೇ ಶೇರ್‌ಗಳು, ಕಾಮೆಂಟ್‌, ಲೈಕ್ ವಿಷಯದಲ್ಲಿ ಟಾಪ್ 10 ರಲ್ಲಿ ಕಾಣಿಸಿಕೊಂಡಿವೆ.

 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  820 ಮಿಲಿಯನ್ ಎಂಗೇಜ್ಮೆಂಟ್ಗಳೊಂದಿಗೆ 8ನೇ  ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 752 ಮಿಲಿಯನ್ ಎಂಗೇಜ್ಮೆಂಟ್ಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಇನ್ನು ಈ ಪಟ್ಟಿಯಲ್ಲಿ  ಫುಟ್ ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ 2.6 ಬಿಲಿಯನ್ ಎಂಗೇಜ್ಮೆಂಟ್‌ಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ.  ಬಾರ್ಸಿಲೋನಾ (2.3 ಬಿಲಿಯನ್), ರಿಯಲ್ ಮ್ಯಾಡ್ರಿಡ್ (1.3 ಬಿಲಿಯನ್) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ಬಹಳ ಇತಿಹಾಸ ಇರುವ  ಈ  ಫುಟ್‌ಬಾಲ್ ಕ್ಲಬ್‌ ಗಳ ಜೊತೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd