RCB ಗೆ ಮಾಡು ಇಲ್ಲವೇ ಮಡಿ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 10 ನೇ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಈ ಪಂದ್ಯ ಆರ್ ಸಿಬಿ ಪಾಲಿಗೆ ಒಂದು ರೀತಿಯಲ್ಲಿ ಮಾಡುವ ಇಲ್ಲವೇ ಮಡಿ ಪಂದ್ಯ ಎಂಬಂತಾಗಿದೆ.
ಯಾಕಂದರೇ ಪ್ಲೇ ಆಫ್ಸ್ ದೃಷ್ಠಿಯಿಂದ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲೇಬೇಕು.
ಅದೂ ಕೂಡ ಉತ್ತಮ ರನ್ ನೊಂದಿಗೆ ಫಾಫ್ ಡುಪ್ಲಸಿಸ್ ಹುಡುಗರು ಗುಜರಾತ್ ತಂಡವನ್ನ ಮಣಿಸಬೇಕು.
ಹೀಗಾಗಿದ್ದಲ್ಲಿ ಆರ್ ಸಿಬಿ ತಂಡದ ಪ್ಲೇ ಆಫ್ಸ್ ಹಾದಿ ಸುಗಮವಾಗುತ್ತದೆ.
ಸದ್ಯ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆರ್ ಸಿಬಿಗೆ ಇನ್ನುಳಿದಿರೋದು ಕೇವಲ 5 ಪಂದ್ಯಗಳು ಮಾತ್ರ.
ಬೆಂಗಳೂರು ತಂಡ ಪ್ಲೇ ಆಫ್ಸ್ ಪ್ರವೇಶಿಸಬೇಕು ಅಂದ್ರೆ ಈ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕು.
ಒಂದು ವೇಳೆ ಅದು ಅಸಾಧ್ಯವಾದ್ರೆ ಆರ್ ಸಿಬಿಯ ಪ್ಲೇ ಆಫ್ಸ್ ಕನಸು ಕನಸಾಗಿಯೇ ಉಳಿಯುತ್ತೆ.
ಮುಖ್ಯವಾಗಿ ಆರ್ ಸಿಬಿಗೆ ನೆಟ್ ರನ್ ರೇಟ್ ಕೂಡ ತುಂಬಾ ಕಳಪೆಯಾಗಿದೆ.
ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿ ಅತ್ಯಂತ ಹೀನಾಯವಾಗಿ ಸೋಲು ಒಪ್ಪಿಕೊಂಡಿದೆ.

ಇದು ತಂಡದ ನೆಟ್ ರನ್ ರೇಟ್ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಪಾತಾಳಕ್ಕೆ ಕುಸಿದು ಬಿದ್ದಿದೆ.
ಹೀಗಾಗಿ ಬೆಂಗಳೂರು ತಂಡ ಪಂದ್ಯ ಗೆಲ್ಲುವುದು ಮಾತ್ರವಲ್ಲದೇ ರನ್ ರೇಟ್ ಹೆಚ್ಚಿಸಿಕೊಳ್ಳುತ್ತಾ ಕೂಡ ಗಮನ ಹರಿಸಬೇಕಾಗಿದೆ.
ಅಂದಹಾಗೆ ಆರ್ ಸಿಬಿ ಮುಂದಿನ ಪಂದ್ಯಗಳನ್ನು ಗೆಲ್ಲಬೇಕಾದರೇ ತಂಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು.
ಮುಖ್ಯವಾಗಿ ತಂಡಕ್ಕೆ ಉತ್ತಮ ಆರಂಭ ಸಿಗಬೇಕು. ಪವರ್ ಪ್ಲೇ ನಲ್ಲಿ ರನ್ ಗಳಿಸಿ ಭದ್ರ ಬುನಾದಿ ಹಾಕಬೇಕು.
ಹೀಗಾಗಿ ತಂಡದ ಓಪನರ್ ಗಳು ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕು.
ಆರ್ ಸಿಬಿ ಕೋಚ್ ಹೇಳಿದಂತೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲಸಿಸ್ ಮುಂದಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸುತ್ತಾರೆ.
ಆದ್ದರಿಂದ ಆರ್ ಸಿಬಿ ಗೆಲುವು ಈ ಇಬ್ಬರು ಬ್ಯಾಟರ್ ಗಳ ಮೇಲೆ ನಿಂತಿದೆ.
ಇನ್ನು ವಿರಾಟ್ ಕೊಹ್ಲಿ ಫಾರ್ಮ್ ಕೂಡ ತಂಡಕ್ಕೆ ಕಾಡುತ್ತಿದೆ. ವಿರಾಟ್ ಕೊಹ್ಲಿ ಮೊದಲಿನ ಟಚ್ ನಲ್ಲಿ ಕಾಣಿಸಿಕೊಂಡರೇ ತಂಡಕ್ಕೆ ಆನೆ ಬಲ ಬಂದಂತಾಗುತ್ತದೆ.
ಇನ್ನು ಮಿಡಲ್ ಆರ್ಡರ್ ನಲ್ಲಿ ಮ್ಯಾಕ್ಸ್ ವೆಲ್ ಮಿಂಚಲೇ ಬೇಕು. ಅನಾನುಭವಿ ಆಟಗಾರರೊಂದಿಗೆ ಮ್ಯಾಕ್ಸಿ ಗೆಲುವಿನ ಇನ್ನಿಂಗ್ಸ್ ಕಟ್ಟಬೇಕು. ಇ
ದು ಸಾಧ್ಯವಾದ್ರೆ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶ್ ಮಾಡಲು ಕೂಡ ಸಹಾಯಕವಾಗಿರುತ್ತದೆ.
ಇನ್ನು ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್, ಸಿರಾಜ್ ಮೊದಲಿನ ಚಾರ್ಮ್ ಕಳೆದುಕೊಂಡಿದ್ದು, ಅವರು ಫಾರ್ಮ್ ಗೆ ಮರಳಬೇಕು.
ಹಸರಂಗ ವಿಕೆಟ್ ಪಡೆದ್ರೂ ಪರಿಣಾಮವಾಗಿಯಾಗಿಲ್ಲ.
ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಆರ್ ಸಿಬಿ ಮುಂದಿನ ಪಂದ್ಯಗಳಲ್ಲಿ ಅಖಾಡಕ್ಕಿಳಿದ್ರೆ ತಂಡದ ಗೆಲುವನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
RCB do or die match ipl 2022








