ವಿಶಾಖಪಟ್ಟಣಂ: ಕೋಲ್ಕತ್ತಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ ಭರ್ಜರಿ ರೈಡ್ ಮಾಡಿದ್ದು, ವಿಶೇಷ ದಾಖಲೆ ಬರೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್, ಬೌಂಡರಿ ಚಚ್ಚಿದ ಪರಿಣಾಮ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಆರ್ ಸಿಬಿ ದಾಖಲೆಯನ್ನು ಮುರಿದಿದೆ. ನಿಗದಿತ ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಸಿಡಿಸುವ ಮೂಲಕ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಸಿಡಿಸಿದ 2ನೇ ತಂಡ ಎಂಬ ಸಾಧನೆಯನ್ನು ಕೋಲ್ಕತ್ತಾ ಮಾಡಿದೆ. ಈ ಮೂಲಕ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಧನೆಯನ್ನು ಎರಡು ತಂಡಗಳು ಮುರಿದಂತಾಗಿದೆ.
2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಗಳಿಸಿದ್ದರು. ಮುಂಬೈ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 277 ಬಾರಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ದಾಖಲೆ ಮುರಿದಿತ್ತು. ಈಗ ನೈಟ್‌ರೈಡರ್ಸ್ 272 ರನ್ ಸಿಡಿಸುವ ಮೂಲಕ ಆರ್‌ಸಿಬಿ ದಾಖಲೆಯನ್ನ ನುಚ್ಚುನೂರು ಮಾಡಿದೆ. ಹೈದರಾಬಾದ್ ತಂಡದ 277 ರನ್‌ಗಳ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ.
ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 277 ಬಾರಿಸುವ ಮೂಲಕ ಆರ್‌ಸಿಬಿ ಹೆಸರಿನಲ್ಲಿದ್ದ ದಾಖಲೆ ಮುರಿದಿತ್ತು. ಐಪಿಎಲ್ ಇತಿಹಾಸದಲ್ಲಿಯೇ ಸನ್ ರೈಸರ್ಸ್ ಹೈದರಾಬಾದ್ – 277 ರನ್, ಕೋಲ್ಕತ್ತಾ ನೈಟ್ ರೈಡರ್ಸ್ – 272 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – 263 ರನ್, ಲಕ್ನೋ ಸೂಪರ್ ಜೈಂಟ್ಸ್ – 257 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು – 248 ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ ತಂಡಗಳಾಗಿವೆ.
ಆರಂಭದಿಂದ ಕೊನೆಯವರೆಗೂ ಕೆಕೆಆರ್ ಬ್ಯಾಟರ್ ಗಳು ರನ್ ಗಳಿಸುತ್ತ ಸಾಗಿದರು. ಮೊದಲ ವಿಕೆಟ್‌ಗೆ ಪಿಲ್ ಸಾಲ್ಟ್ – ಸುನೀಲ್ ನರೇನ್ ಜೋಡಿ 27 ಎಸೆತಗಳಲ್ಲಿ 60 ರನ್ ಬಾರಿಸಿದರೆ, 2ನೇ ವಿಕೆಟ್‌ಗೆ ರಘುವಂಶಿ ಮತ್ತು ಸುನೀಲ್ ನರೇನ್ ಜೋಡಿ 48 ಎಸೆತಗಳಲ್ಲಿ ಬರೋಬ್ಬರಿ 104 ರನ್ ಗಳಿಸಿತು. ರಸೆಲ್-ಅಯ್ಯರ್ ಜೋಡಿ ಕೇವಲ 24 ಎಸೆತಗಳಲ್ಲಿ ಸ್ಫೋಟಕ 56 ರನ್ ಬಾರಿಸಿದರೆ, ರಿಂಕು-ರಸೆಲ್ ಜೋಡಿ ಕೇವಲ 11 ಎಸೆತಗಳಲ್ಲಿ 32 ರನ್ ಗಳಿಸಿತು. ಹೀಗಾಗಿ ತಂಡದ ಮೊತ್ತ 270 ರ ಗಡಿ ದಾಟುವಂತಾಯಿತು.