ಐಪಿಎಲ್ 2021- ಆರ್ ಸಿಬಿ ತಂಡ ಸೇರಿದ ಫಿನ್ ಆಲೆನ್.. ಜೋಶ್ ಫಿಲಿಪ್ಪೆ ಔಟ್..!

1 min read
finn allen newziland saakshatv

ಐಪಿಎಲ್ 2021- ಆರ್ ಸಿಬಿ ತಂಡ ಸೇರಿದ ಫಿನ್ ಆಲೆನ್.. ಜೋಶ್ ಫಿಲಿಪ್ಪೆ ಔಟ್..!

#RCB  #Newzilandkeeper  #FinnAllen #JoshPhilippe  #IPL2021 #royal challengers bengaluru #viratkohli

josh phillippe austrelia saakshatv14ನೇ ಐಪಿಎಲ್ ಟೂರ್ನಿಯ ಆರಂಭದಲ್ಲೇ ಆರ್ ಸಿಬಿ ತಂಡಕ್ಕೆ ಆಘಾತವಾಗಿದೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಜೋಶ್ ಫಿಲಿಪ್ಪೆ ಅವರು ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ.
ವೈಯಕ್ತಿಕ ಕಾರಣ ನೀಡಿರುವ ಜೋಶ್ ಫಿಲಿಪ್ಪೆ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ನ್ಯೂಜಿಲೆಂಡ್ ನ ಯುವ ವಿಕೆಟ್ ಕೀಪರ್ ಫಿನ್ ಆಲೆನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆರ್ ಸಿಬಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜೋಶ್ ಫಿಲಿಪ್ಪೆ ಅವರು ಆಸ್ಟ್ರೇಲಿಯಾದ ಭವಿಷ್ಯದ ಆಟಗಾರ ಅಂತನೇ ಬಿಂಬಿತರಾಗಿದ್ದಾರೆ. ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಜೋಶ್ ಫಿಲಿಪ್ಪೆ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು.
ಇನ್ನು ಜೋಶ್ ಫಿಲಿಪ್ಪೆ ಸ್ಥಾನಕ್ಕೆ ಆಯ್ಕೆಯಾಗಿರುವ ಫಿನ್ ಆಲೆನ್ ಕೂಡ ಅದ್ಭುತ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್. ನ್ಯೂಜಿಲೆಂಡ್ ನ ದೇಶಿಯ ಸೂಪರ್ ಸ್ಮಾಶ್ ಟಿ-ಟ್ವೆಂಟಿಯಲ್ಲಿ 512 ರನ್ ಗಳಿಸಿದ್ದಾರೆ.
ಫಿನ್ ಆಲೆನ್ ಅವರು ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಎಂಟ್ರಿಯಾಗಿಲ್ಲ. ಇದೀಗ ಐಪಿಎಲ್ ಜೊತೆಗಿನ ಒಪ್ಪಂದದಿಂದಾಗಿ ಆಲೆನ್ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಕೂಡ ಮಿಸ್ ಆಗಲಿದೆ. ಮಾರ್ಚ್ 28ರಿಂದ ನ್ಯೂಜಿಲೆಂಡ್ ಮತ್ತು ಬಾಂಗ್ಲಾ ದೇಶ ನಡುವೆ ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿ ನಡೆಯಲಿದೆ. ಹೀಗಾಗಿ ಈ ಸರಣಿಯಿಂದ ಫಿನ್ ಆಲೆನ್ ಅವರು ವಂಚಿತರಾಗಲಿದ್ದಾರೆ.

#RCB  #Newzilandkeeper  #FinnAllen #JoshPhilippe  #IPL2021 #royal challengers bengaluru #viratkohli

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd