RCB Unbox 2023 Event : ಹೊಸ ಜೆರ್ಸಿ ಅನಾವರಣ ; ಎಬಿಡಿ, ಕ್ರಿಸ್ ಗೇಲ್ ಜೆರ್ಸಿಗೆ ನಿವೃತ್ತಿ…
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರ ಆರಂಭಕ್ಕೆ ದಿನಗಣನೆ ಆಂಭವಾಗಿದ್ದು, ಎಲ್ಲಾ ಹತ್ತು ತಂಡ ರಣೋತ್ಸಾಹದಲ್ಲಿ ಸಮರಭ್ಯಾಸವನ್ನ ನಡೆಸುತ್ತಿವೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಶಕಗಳ ಕನಸನ್ನ ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಅದೃಷ್ಟದ ಬದಲಾವಣೆಯನ್ನ ನಿರೀಕ್ಷಿಸುತ್ತಿದೆ. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹ್ಯಾಜಲ್‌ವುಡ್ ನಂತಹ ಘಟಾನುಘಟಿಗಳಿರುವ RCB ಈ ಭಾರಿ ಡಿಫ್ರೆಂಟ್ ಪ್ಲಾನ್ ನೊಂದಿಗೆ ಕಣಕ್ಕಿಳಿಯಲಿದೆ.
ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರ್ಚ್ 26, 2023 ರಂದು ಸಂಜೆ 4 ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ ಸ್ಟಡ್ಡ್ ಅನ್‌ಬಾಕ್ಸಿಂಗ್ ಕಾರ್ಯಕ್ರಮವನ್ನ ಆಯೋಜಿಸಿದೆ. ಬೆಂಗಳೂರು ಮೂಲದ ಫ್ರಾಂಚೈಸಿ ಈವೆಂಟ್‌ಗೆ ಆರ್‌ಸಿಬಿ ಅನ್‌ಬಾಕ್ಸ್ ಎಂದು ಕರೆದಿದ್ದು, ಐಪಿಎಲ್ 2023 ರ ಜರ್ಸಿಯನ್ನ ಅನಾವರಣಗೊಳಿಸಲಾಗುತ್ತದೆ. ಅಲ್ಲದೇ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಪ್ರಮುಖ ಆಟಗಾರರನ್ನು ಹಾಲ್ ಆಫ್ ಫೇಮ್‌ನಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈ ಕ್ರಾರ್ಯಕ್ರಮಕ್ಕಾಗಿ ಕ್ರಿಸ್ ಗೇಲ್ ಮತ್ತಿ ಎಬಿ ಡಿವಿಲಿಯರ್ಸ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.
ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಸಂಪೂರ್ಣವಾಗಿ ಅಭಿಮಾನಿಗಳ ಕಾರ್ಯಕ್ರಮವಾಗಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. RCB ಅಭಿಮಾನಿಗಳು RCB ಯ ಅಧಿಕೃತ ವೆಬ್‌ಸೈಟ್‌ನಿಂದ ಟಿಕೆಟ್‌ಗಳನ್ನು ಖರೀದಿಸಬಹುದು. ಈವೆಂಟ್ ವಿವಿಧ ಕಾರ್ಯಕ್ರಮಗಳನ್ನ ಒಳಗೊಂಡಿರುತ್ತದೆ, ಅದರಲ್ಲಿ ಹಾಲ್ ಆಫ್ ಫೇಮ್ ಇಂಡಕ್ಷನ್ ಪ್ರಮುಖ ಕಾರ್ಯಕ್ರಮ . ಹಾಲ್ ಆಫ್ ಫೇಮ್ ಈವೆಂಟ್‌ನಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಮತ್ತು 360 ಎಬಿ ಡಿವಿಲಿಯರ್ಸ್ ಭಾಗವಹಿಸಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೇಲ್ ಮತ್ತು ಡಿವಿಲಿಯರ್ಸ್ ಧರಿಸಿದ್ದ ಜರ್ಸಿ ಸಂಖ್ಯೆ 17 ಮತ್ತು 333 ಅನ್ನ ನಿವೃತ್ತಿಗೊಳಿಸಲಿದೆ.
ಇಷ್ಟೆ ಅಲ್ಲದೇ ಈವೆಂಟ್ ನಲ್ಲಿ ಜೇಸನ್ ಡೆರುಲೋ, ಸೋನು ನಿಗಮ್, ತುಳಸಿ ಕುಮಾರ್ ಮತ್ತು ಅದಿತಿ ಸಿಂಗ್ ಶರ್ಮಾ ಅವರ ಲೈವ್ ಪ್ರದರ್ಶನಗಳು ಸಹ ಇರುತ್ತವೆ. ಬೆಂಗಳೂರು ಮೂಲದ ರಾಕ್ ಬ್ಯಾಂಡ್ ಥರ್ಮಲ್ ಮತ್ತು ಕ್ವಾರ್ಟರ್ ಸಹ ಈವೆಂಟ್‌ನಲ್ಲಿ ಭಾಗವಹಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ IPL 2023
ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಮೈಕಲ್ ಬ್ರೇಸ್, ಜೋಶ್ ಅಕಾಶ್ ಬ್ರಾಸ್‌ವೆಲ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.
RCB Unbox 2023 Event: New Jersey Unveiled; ABD, Chris Gayle retires to jersey…