RR vs RCB preview | ರಾಯಲ್ಸ್ ಕಾಳಗದ ಅಂಕಿಅಂಶಗಳು..
ಮುಂಬೈ : 15 ನೇ ಆವೃತ್ತಿ ಇಂಡಿಯನ್ ಪ್ರಿಮಿಯರ್ ಲೀಗ್.. 39 ನೇ ಪಂದ್ಯ.. ಎಂಸಿಎ ಮೈದಾನ.. ಇದು ಐಪಿಎಲ್ ನ ರಾಯಲ್ಸ್ ಕಾಳಗ..
ಹೌದು..! ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಈ ಆವೃತ್ತಿಯಲ್ಲಿ ರಾಯಲ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳು ಎರಡನೇ ಬಾರಿಗೆ ಗುದ್ದಾಡಲಿವೆ. ಕಳೆದ ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಆರ್ ಸಿಬಿ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್ ಸಿಬಿ ಪರ ಶಹಬ್ಬಾಸ್ ಅಹ್ಮದ್ 45 ರನ್, ದಿನೇಶ್ ಕಾರ್ತಿಕ್ 44 ರನ್ ಗಳಿಸಿದ್ದರು. ರಾಯಲ್ಸ್ ಪರ ಜೋಸ್ ಬಟ್ಲರ್ 70 ರನ್, ಹಿಟ್ಮೇಯರ್ 42 ರನ್ ಸಿಡಿಸಿದ್ದರು.
ಫಾಫ್ ಡುಪ್ಲಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ ಈ ಆವೃತ್ತಿಯಲ್ಲಿ ಎಂಟು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್ ರಾಯಲ್ಸ್ ತಂಡ ಏಳು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತಿದೆ.

ಬೆಂಗಳೂರು ತಂಡ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಆರ್ ಸಿಬಿ 9 ವಿಕೆಟ್ ಗಳಿಂದ ಸೋತಿದೆ. ಇತ್ತ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬಟ್ಲರ್ ಶತಕ ಸಿಡಿಸಿದ್ರೆ, ಪಡಿಕ್ಕಲ್ 54 ರನ್ ಬಾರಿಸಿದ್ದರು.
ಉಭಯ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ ನೋಡೊದಾದ್ರೆ…
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಮತ್ತು ರಾಯಲ್ಸ್ ತಂಡಗಳು ಈವರೆಗೂ 25 ಬಾರಿ ಸೆಣಸಾಡಿವೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 13 ಬಾರಿ ಗೆಲುವು ಸಾಧಿಸಿದೆ. ರಾಜಸ್ಥಾನ್ ತಂಡ 10 ಬಾರಿ ಗೆದ್ದಿದೆ. 2 ಪಂದ್ಯಗಲ್ಲಿ ಫಲಿತಾಂಶ ಬಂದಿಲ್ಲ. ಕಳೆದ ಐದು ಪಂದ್ಯದಲ್ಲಿ ಐದಕ್ಕೆ ಐದೂ ಪಂದ್ಯಗಳನ್ನ ಆರ್ ಸಿಬಿ ತಂಡ ಗೆದ್ದುಕೊಂಡಿದೆ. 2021ರಲ್ಲಿ ಎರಡು ಪಂದ್ಯಗಳಲ್ಲಿ ಆರ್ ಬಿಸಿ ಮೇಲು ಗೈ ಸಾಧಿಸಿದೆ.
ಇನ್ನು ಮೊದಲು ಬ್ಯಾಟಿಂಗ್ ಮಾಡಿದಾಗ ರಾಜಸ್ಥಾನ್ ರಾಯಲ್ಸ್ ತಂಡ ನಾಲ್ಕು ಬಾರಿ ಗೆದ್ದಿದ್ದರೇ ಆರ್ ಸಿಬಿ ತಂಡ ಮೂರು ಬಾರಿ ಗೆಲುವು ಸಾಧಿಸಿದೆ. ಸೆಕೆಂಡ್ ಬ್ಯಾಟಿಂಗ್ ಮಾಡಿದಾಗ 10 ಬಾರಿ ಬೆಂಗಳೂರು ತಂಡ ಗೆದ್ದಿದೆ. ರಾಯಲ್ಸ್ ತಂಡ 6 ಬಾರಿ ಗೆಲುವು ಸಾಧಿಸಿದೆ.
ಆರ್ ಸಿಬಿ ವಿರುದ್ಧ ರಾಜಸ್ಥಾನ್ ಪರ ಅಜಿಂಕ್ಯಾ ರಹಾನೆ 347 ರನ್ ಗಳಿಸಿದ್ರೆ, ಶ್ರೇಯಸ್ ಗೋಪಾಲ್ 14 ವಿಕೆಟ್ ಪಡೆದಿದ್ದಾರೆ. ಇನ್ನು ಆರ್ ಆರ್ ವಿರುದ್ಧ ಆರ್ ಸಿಬಿ ಪರ ವಿರಾಟ್ ಕೊಹ್ಲಿ 584 ರನ್ ಸಿಡಿಸಿದ್ರೆ, ಚಹಾಲ್ 18 ವಿಕೆಟ್ ಪಡೆದಿದ್ದಾರೆ.
rcb vs rr head to head records