ಕೊರೊನಾ ಸೋಂಕಿಗೆ ರಿಯಾ ಚಕ್ರವರ್ತಿ ಆಪ್ತ ಸಂಬಂಧಿ ಬಲಿ
ಮುಂಬೈ : ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರ ಚಿಕ್ಕಪ್ಪ ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಿಯಾ ಚಕ್ರವರ್ತಿ, ‘ನನ್ನ ಚಿಕ್ಕಪ್ಪ ನಿಜ ಜೀವನದಲ್ಲಿ ಹೀರೋ ಆಗಿದ್ದರು. ಕೋವಿಡ್‌ಗೆ ತುತ್ತಾಗಿದ್ದ ಅವರು ಮೇ 1 ರಂದು ಕೊನೆ ಉಸಿರೆಳೆದಿದ್ದಾರೆ. ಕೋವಿಡ್‌ಗೆ ಒಳ್ಳೆಯವರು, ಕೆಟ್ಟವರೆಂಬ ಬೇಧವಿಲ್ಲ’ ಎಂದಿದ್ದಾರೆ.
ಚಿಕ್ಕಪ್ಪನ ಸಾವಿನ ವಿಷಯ ಹಂಚಿಕೊಳ್ಳುವ ಜೊತೆಗೆ ಅಭಿಮಾನಿಗಳಿಗೆ ಸಂದೇಶ ನೀಡಿರುವ ರಿಯಾ ಚಕ್ರವರ್ತಿ, ‘ಎಲ್ಲರೂ ಮನೆಯಲ್ಲಿರಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಕೊರೊನಾ ಅನ್ನು ಹೋಗಲಾಡಿಸಲು ಅದೊಂದೆ ಅಸ್ತ್ರ’ ಎಂದಿದ್ದಾರೆ ರಿಯಾ.
ಅಂದ್ಹಾಗೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ . ಸುಶಾಂತ್ ಸಿಂಗ್ ಸಾವಿನ ಬಳಿಕ ಹೆಚ್ಚು ಸುದ್ದಿಯಲ್ಲಿದ್ದ ನಟಿ.. ಸುಸಾಂತ್ ಕೊಲೆ ಆರೋಪದಲ್ಲೂ ರಿಯಾ ಹೆಸರು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬರೀ ರಿಯಾ ಚಕ್ರವರ್ತಿಯದ್ದೇ ಮಾತಾಗಿತ್ತು. ಸುಸಾಂತ್ ಸಾವಿನ ಪ್ರಕರಣ ತನಿಖೆ ಶುರುವಾಗಿ ಬಳಿಕ ಅದು ಡ್ರಗ್ಸ್ ಕೇಸ್ ಗೆ ಪರಿವರ್ತನೆಯಾಗಿ ಇದೇ ಕೇಸ್ ನಲ್ಲಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಜೈಲಿಗೂ ಹೋಗಿ ಇದೀಗ ಜಾಮೀನಿನ ಮೇಲೆ ಹೊರಬಂದಿದ್ಧಾರೆ.
ದೇಶದಲ್ಲಿ ಕೊರೊನಾ ಹೆಮ್ಮಾರಿಯಿಂದ ನಿತ್ಯ ಸಾವಿರಾರು ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಸೇರಿ ಸಿನಿಮಾರಂಗದವರು, ಸೆಲೆಬ್ರಿಟಿಗಳು ತಾರೆಯರು ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.








