Realme C33 : ಕಡಿಮೆ ಬೆಲೆಗೆ ಬಿಡುಗಡೆಯಾಗಲಿದೆ 50 ಮೆಗಾಪಿಕ್ಸೆಲ್ ಕ್ಯಾಮೆರಾ, 5,000mAh ಬ್ಯಾಟರಿ ಫೋನ್
ಸ್ಮಾರ್ಟ್ ಫೋನ್ ತಾಯಾರಕ ಸಂಸ್ಥೆ Realme ಬೇಸಿಕ್ ಮಟ್ಟದ ಸ್ಮಾರ್ಟ್ಫೋನ್ Realme C33 ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್ ಭಾರತದಲ್ಲಿ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.
ಇದರ ಜೊತೆಗೆ ಕಂಪನಿಯು Realme Buds Air 3S ವೈರ್‌ಲೆಸ್ ಇಯರ್‌ಬಡ್‌ಗಳು ಮತ್ತು Realme Watch 3 Pro ನ್ನ ಬಿಡುಗಡೆ ಮಾಡಲಿದೆ.
Realme C33 ಮೊಬೈಲ್ ನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, 5,000mAh ಬ್ಯಾಟರಿಯನ್ನ ಅಳವಡಿಸಲಾಗಿದೆ. ಮೊಬೈಲ್ ನ್ನ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.
Realme C33 ನ ನಿರೀಕ್ಷಿತ ಫೀಚರ್ಸ್ ಈ ರೀತಿ ಇರಲಿದೆ
Realme C33 ಸೆಪ್ಟೆಂಬರ್ 6 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಫೋನಿನ ಬೆಲೆ 10 ಸಾವಿರಕ್ಕಿಂತ ಕಡಿಮೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಸ್ಲಿಮ್ ಬಾಡಿ ಮತ್ತು ಉತ್ತಮ ವಿನ್ಯಾಸದೊಂದಿಗೆ ಮೊಬೈಲ್ ನ್ನ ಪ್ರಸ್ತುಪಡಿಸಲಾಸಗುತ್ತಿದೆ. ಸ್ಮಾರ್ಟ್ ಪೋನ್ 8.3 ಎಂಎಂ ಸ್ಲಿಮ್ ಡಿಸೈನ್ ಮತ್ತು 187 ಗ್ರಾಂ ತೂಕವನ್ನ ಹೊಂದಿದೆ. ಅಲ್ಲದೆ, ಫೋನ್ ನೀಲಿ, ಕಪ್ಪು ಮತ್ತು ಗೋಲ್ಡ್ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಮೊಬೈಲ್ ನಲ್ಲಿ 4 GB RAM ಜೊತೆಗೆ 128 GB ಮೆಮೋರಿ ಇರಬಹುದು. Realme C33 Android 12 ಮತ್ತು Unisoc ಪ್ರೊಸೆಸರ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. 50 ಮೆಗಾಪಿಕ್ಸೆಲ್ ಡ್ಯುಯಲ್ AI ಕ್ಯಾಮೆರಾ ಜೊತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ನ್ನ ಮೊಬೈಲ್ ನಲ್ಲಿ ಕೊಡಲಾಗುತ್ತಿದೆ.
Realme C33 ಬ್ಯಾಟರಿ
Realme C33 5,000mAh ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಅದು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 37 ದಿನಗಳವರೆಗೆ ಬ್ಯಾಕಪ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.