ಕೊಹ್ಲಿಯಿಂದ ನಾಯಕತ್ವ ಕಿತ್ತುಕೊಳ್ಳಲು ಇದೇ ಕಾರಣ… rohit-sharma saaksha tv
ಊಹಾಪೋಹಗಳು ನಿಜವಾಗಿವೆ.. ಸೌತ್ ಆಫ್ರಿಕಾ ಪ್ರವಾಸದ ಬೆನ್ನಲ್ಲೇ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನ ಕೆಳಗಿಳಿಸಿ, ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ತಂಡದ ಸಾರಥ್ಯ ವಹಿಡಲಾಗಿದೆ.
ಏಕಾಏಕಿ ಯಶಸ್ವಿ ನಾಯಕನಾಗಿ ಹೆಸರು ಮಾಡಿರುವ ಕೊಹ್ಲಿ ಅವರಿಂದ ಏಕದಿನ ನಾಯಕತ್ವ ಕಿತ್ತುಕೊಂಡಿರುವುದು ವಿರಾಟ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಕ್ರಿಕೆಟೇತರ ಕಾರಣಗಳೇನಾದರೂ ಇವೆಯೇ ಎಂಬ ವಿಶ್ಲೇಷಣೆ ಇದೀಗ ಶುರುವಾಗಿದೆ.
ಏಕದಿನ ತಂಡದ ನಾಯಕನಾಗಿ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. 95 ODI ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ, 75 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ 27 ಮ್ಯಾಚ್ ಗಳಲ್ಲಿ ಪರಾಜಯವಾಗಿದ್ದಾರೆ. ಇದನ್ನು ಗಮನಿಸಿದರೇ ಯಾರಾಗಿದಾದರೂ ಗೊತ್ತಾಗುತ್ತೆ ಕೊಹ್ಲಿಯ ನಾಯಕತ್ವದ ತಾಕತ್ತು ಎಂಥದ್ದು ಅಂತ.
ಅಂದಹಾಗೆ ಕೊಹ್ಲಿ ಶೇಕಡಾ 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿಕೊಟ್ಟ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ದಾಖಲೆ ವಿಶ್ವಕ್ರಿಕೆಟ್ ನಲ್ಲಿ ಕೇವಲ ಮೂವರಿಗೆ ಮಾತ್ರ ಇದೆ.
ಇದಲ್ಲದೇ ನಾಯತ್ವದ ಒತ್ತಡದಲ್ಲಿಯೂ ವಿರಾಟ್ ತಮ್ಮ ಬ್ಯಾಟಿಂಗ್ ನಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ. 72.65 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ 5,449 ರನ್ ಗಳಿಸಿದ್ದಾರೆ. ಇದರಲ್ಲಿ 21 ಶತಕ ಮತ್ತು 27 ಅರ್ಧಶತಕಗಳು ಸೇರಿವೆ.
ಆದ್ರೆ ಈ ದಾಖಲೆಗಳು ಕೊಹ್ಲಿ ನಾಯಕತ್ವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ವಿರಾಟ್ ಎರಡು ICC ಪಂದ್ಯಾವಳಿಗಳಲ್ಲಿ ವಿಫಲರಾಗಿರೋದು. 2017ರ ಚಾಂಪಿಯನ್ಸ್ ಟ್ರೋಪಿಯ ಫೈನಲ್ ನಲ್ಲಿ ಸೋಲು.
2019ರ ಏಕದಿನ ವಿಶ್ವಕಪ್ ನಲ್ಲಿ ಕಪ್ ಗೆಲ್ಲದೇ ಇರೋದು ಅವರಿಂದ ನಾಯಕತ್ವದ ಕಿತ್ತುಕೊಳ್ಳಲು ಕಾರಣವಾಗಿದೆ ಎಂದು ಒಂದು ಚರ್ಚೆ ನಡೆಯುತ್ತಿದೆ.
ಆದರೆ, ಬಿಸಿಸಿಐ ಮೂಲಗಳ ಪ್ರಕಾರ, ಕ್ರಿಕೆಟ್ ಅಲ್ಲದ ಕಾರಣಗಳಿಗಾಗಿ ಕೊಹ್ಲಿ ಅವರನ್ನು ನಾಯಕತ್ವದಿಂದ ವಜಾಗೊಳಿಸಲಾಗಿದೆ.
ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಜೊತೆ ಸೇರಿ ಎಲ್ಲವನ್ನೂ ಸ್ವತಃ ನಿಯಂತ್ರಿಸಲು ಪ್ರಯತ್ನಿಸಿದರಂತೆ.
ಒಂದು ಹಂತದಲ್ಲಿ ರೋಹಿತ್ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿ ರಾಹುಲ್ ಅಥವಾ ಪಂತ್ ಒಬ್ಬರಿಗೆ ಉಪನಾಯಕ ಸ್ಥಾನ ನೀಡಬೇಕೆಂದು ಆಯ್ಕೆ ಸಮಿತಿ ಸಲಹೆ ನೀಡಿದ್ದರಂತೆ.
ಈ ಕಾರಣಗಳಿಂದ ಅವರನ್ನು ನಾಯಕತ್ವದಿಂದ ಕೆಳಗಿಸಲಾಗಿದೆ ಎಂದು ಹೇಳಲಾಗುತ್ತಿದೆ.









