ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ (By Elections 2024) ಕೆಲವು ಸಣ್ಣಪುಟ್ಟ ಅಹಿತಕರ ಘಟನೆ ಹೊರತು ಪಡಿಸಿದರೆ ಶಾಂತಿಯಿಂದ ನಡೆದಿದೆ.
ಚನ್ನಪಟ್ಟಣದಲ್ಲಿ ದಾಖಲೆಯ ಶೇ.88.80ರಷ್ಟು ಮತದಾನವಾಗಿದೆ. ಶಿಗ್ಗಾಂವಿಯಲ್ಲಿ ಶೇ. 80.48ರಷ್ಟು, ಸಂಡೂರಿನಲ್ಲಿ ಶೇ. 76.24ರಷ್ಟು ಮತದಾನವಾಗಿದೆ. ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ, ಎಲ್ಲೆಡೆ ಶಾಂತಿಯಿಂದ ಮತದಾನ ನಡೆಯಿತು.
ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು ಮತದಾನ ಮಾಡಿದವರ ಸಂಖ್ಯೆ – 2,06,866.
ಪುರುಷ ಮತದಾರರು – 1,00,501, ಮಹಿಳಾ ಮತದಾರರು – 1,06,362, ತೃತೀಯಲಿಂಗಿಗಳು – 3 ಆಗಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,91,166, ಪುರುಷ ಮತದಾರರು- 98,642, ಮಹಿಳಾ ಮತದಾರರು- 92,522, ತೃತೀಯ ಲಿಂಗಿಗಳು – 2 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,80,189, ಪುರುಷ ಮತದಾರರು – 90,922, ಮಹಿಳೆ ಮತದಾರರು – 89,252, ತೃತೀಯಲಿಂಗಿಗಳು -12 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.








