ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 4-1 ಅಂತರದ ಭರ್ಜರಿ ಜಯ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ನಂತರ ಸತತವಾಗಿ ನಾಲ್ಕು ಪಂದ್ಯ ಗೆದ್ದಿದೆ. ಯಶಸ್ವಿ ಜೈಸ್ವಾಲ್ ಎರಡನೇ ಮತ್ತು ಮೂರನೇ ಟೆಸ್ಟ್‌ನಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ದ್ವಿಶತಕಗಳನ್ನು ಸಿಡಿಸಿದರು. ಸರಣಿಯುದ್ದಕ್ಕೂ ದಾಖಲೆಗಳ ಶಿಖರವನ್ನೇರಿದರು. ಇವರ ಜೊತೆಗೆ ಇನ್ನೂ ಕೆಲ ಆಟಗಾರರು ಈ ಸರಣಿಯನ್ನು ನೂತನ ದಾಖಲೆ ಸೃಷ್ಟಿಸಿದರು. ಈ ಸರಣಿಯಲ್ಲಿ 712 ರನ್ ಗಳಿಸಿ ಸುನಿಲ್ ಗವಾಸ್ಕರ್ ನಂತರ ಸರಣಿಯಲ್ಲಿ 700 ರನ್ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡರು.
ಅಲ್ಲದೇ ಜೈಸ್ವಾಲ್ ಟೆಸ್ಟ್ ಸರಣಿಯಲ್ಲಿ 26 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದಿದ್ದಾರೆ. ಭಾರತೀಯ ಬ್ಯಾಟರ್‌ನಿಂದ ಟೆಸ್ಟ್ ಸರಣಿಯೊಂದರಲ್ಲಿ ಬಂದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯಾಗಿದೆ. ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (655) ಹಿಂದಿಕ್ಕಿದ್ದಾರೆ. ಜೈಸ್ವಾಲ್ ಬ್ಯಾಟ್‌ನಿಂದ ಅಬ್ಬರಿಸಿದರೆ, ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಮಿಂಚಿದರು.
ಅಶ್ವಿನ್ 26 ವಿಕೆಟ್‌ಗಳೊಂದಿಗೆ ಪ್ರಮುಖ ವಿಕೆಟ್-ಟೇಕರ್ ಆಗಿ ಸರಣಿ ಕೊನೆಗೊಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಐದು ವಿಕೆಟ್ ಗೊಂಚಲು ಆರ್. ಅಶ್ವಿನ್ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿ 36 ನೇ ಐದು ವಿಕೆಟ್ ಸಾಧನೆ ಮಾಡಿಕೊಂಡಿದ್ದಾರೆ.
ಅಶ್ವಿನ್ ತಮ್ಮ 100 ನೇ ಟೆಸ್ಟ್‌ನಲ್ಲಿ ಈ ಸಾಧನೆಯನ್ನು ಮಾಡಿದರು ಎಂಬುದು ವಿಶೇಷ. ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಎಂಬ ದಾಖಲೆ ಬರೆದರು. ಭಾರತ ಈ ಸರಣಿಯನ್ನು 4-1 ಅಂತರದಿಂದ ಗೆದ್ದು 112 ವರ್ಷಗಳಲ್ಲಿ ಮೊದಲ ಟೆಸ್ಟ್ ಸೋತ ನಂತರ ತಂಡವು 4-1 ರಿಂದ ಸರಣಿಯನ್ನು ಗೆದ್ದ ಮೊದಲ ಉದಾಹರಣೆಗೆ ಸಾಕ್ಷಿಯಾಯಿತು.