ಒಂದಲ್ಲಾ ಒಂದು ತಿರುವು ಪಡೆದುಕೊಳ್ಳುತ್ತಿರುವ ಸುಶಾಂತ್ ಆತ್ಮಹತ್ಯೆ ಪ್ರಕರಣ ಇದೀಗ ದೆಶಾದ್ಯಂತ ಸಂಚಲನ ಸೃಷ್ಟಿಸಿದೆ. ರೆಹಾ ವಿರುದ್ಧ ಸುಶಾಂತ್ ತಂದೆ ಆರೋಪ ಮಾಡಿದಾಗಿನಿಂದಲೂ ಈ ಪ್ರಕರಣದ ತೀವ್ರತೆ ಹೆಚ್ಚಾಗಿದೆ. ಇದೀಗ ಸುಶಾಂತ್ ಸ್ನೇಹಿತ ಸುಶಾಂತ್ ಪರಿವಾರದವರ ವಿರುದ್ಧ ಮಾಡಿರುವ ಆರೋಪವೊಂದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸುಶಾಂತ್ ಸಿಂಗ್ ಮತ್ತು ರೆಹಾ ಚಕ್ರವರ್ತಿ ಇಬ್ಬರ ಗೆಳೆಯ ಸಿದ್ದಾರ್ಥ್ ಮುಂಬೈ ಪೊಲೀಸರಿಗೆ ಇಮೇಲ್ ಮಾಡಿದ್ದು ರೆಹಾ ವಿರುದ್ಧ ಹೇಳಿಕೆ ನೀಡುವಂತೆ ಸುಶಾಂತ್ ಕುಟುಂಬದವರು ಒತ್ತಾಯಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. “ಸುಶಾಂತ್ ಕುಟುಂಬದಿಂದ 3 ಫೋನ್ ಕರೆಗಳು ಬಂದಿವೆ. ಅವರು ನನಗೆ ರೆಹಾ , ಸುಶಾಂತ್ ಹಣವನ್ನು ಖರ್ಚು ಮಾಡಿರುವ ಬಗ್ಗೆ” ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ “ನನ್ನ ಜೊತೆ ಜುಲೈ 22ರಂದು ಸುಶಾಂತ್ ಅವರ ಸಹೋದರಿ ಮೀತು ಸಿಂಗ್, ಸಂಬಂಧಿ ಒಪಿ ಸಿಂಗ್ ನನ್ನ ಜೊತೆಗೆ ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿ ರೆಹಾ ವಿರುದ್ಧ ಹೇಳಿಕೆ ನೀಡುವಂತೆ ಕೋರಿದ್ದರು. ಇದರಲ್ಲಿ ಅಪರಿಚಿತ ಕರೆ ಕೂಡ ಇತು” ಎಂದು ಶಾಂಕಿಗ್ ಆರೋಪವನ್ನು ಮಾಡಿದ್ದಾರೆ.
MGNREGS : ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ…
MGNREGS : ನರೇಗಾ ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿ ; ದಿನಗೂಲಿ ದರ ಹೆಚ್ಚಿಸಿದ ಸರ್ಕಾರ… ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ನರೇಗಾ ಕೂಲಿಕಾರರಿಗೆ...