ದರ್ಶನ್ ರನ್ನು ಭೇಟಿ ಮಾಡಿಸುತ್ತೇನೆ ಎಂದು ರೇಣುಕಾಸ್ವಾಮಿಯನ್ನು ನಂಬಿಸಿ, ಬೆಂಗಳೂರಿಗೆ ಕರೆದುಕೊಂಡು ಬಂದು ಹತ್ಯೆ ಮಾಡಲಾಗಿದೆ ಎಂಬುವುದು ಸದ್ಯ ಬಹಿರಂಗವಾಗಿದೆ.
ಆರೋಪಿ ರಘು ಚಿತ್ರದುರ್ಗದ ಹೊರವಲಯದಲ್ಲಿ ರೇಣುಕಾ ಸ್ವಾಮಿಯನ್ನು ಆಟೋದಿಂದ ಕಾರಿಗೆ ಶಿಫ್ಟ್ ಮಾಡಿಸಿದ್ದಾನೆ. ಮಾತನ್ನು ನಂಬಿದ ರೇಣುಕಾ ಸ್ವಾಮಿ ಅಪಹರಣಕಾರರ ಜೊತೆ ಹೋಗಿದ್ದಾನೆ. ಆದರೆ ಶವವಾಗಿ ಪತ್ತೆಯಾಗಿದ್ದಾನೆ.
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಫೋಟೋ ಕಳಿಸಿದ್ದ ರೇಣುಕಾ ಸ್ವಾಮಿಗೆ (Renuka Swamy) ಬುದ್ಧಿ ಕಲಿಸಲು ದರ್ಶನ್ ಹಾಗೂ ಸಹಚರರು ಕಾನೂನು ಕೈಗೆತ್ತಿಕೊಂಡಿದ್ದಾರೆ. ರೇಣುಕಾ ಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿ, ಮೋರಿಗೆ ಎಸೆದಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದಲ್ಲಿ ಐವರು ಸೇರಿಕೊಂಡು ರೇಣುಕಾ ಸ್ವಾಮಿ ಕಿಡ್ನ್ಯಾಪ್ ಮಾಡಿದ್ದರು. ರಾಘವೇಂದ್ರ, ಜಗದೀಶ್, ಅನು, ರಾಜು, ರವಿ ಅಪಹರಿಸಿದ್ದಾರೆ ಎನ್ನಲಾಗಿದೆ. ಜಗದೀಶ್, ಅನು, ರವಿ ಹಾಗೂ ರಾಜು ಚಿತ್ರದುರ್ಗದವರು ಎನ್ನಲಾಗಿದೆ.
ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆಂದು ರೇಣುಕಾಸ್ವಾಮಿಗೆ ರಘು ನಂಬಿಸಿದ್ದ. ದರ್ಶನ್ ಭೇಟಿ ಮಾಡುವ ಆಸೆಯಿಂದ ರೇಣುಕಾ ಸ್ವಾಮಿ ಹೋಗಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.