ನೇತಾಜಿ ಜನ್ಮದಿನ : ಕಾರ್ಕಳದಲ್ಲಿ ಗುಡ್ಡಗಾಡು ಓಟ ಸ್ಪರ್ಧೆ

1 min read
republic day Run

ನೇತಾಜಿ ಜನ್ಮದಿನ : ಕಾರ್ಕಳದಲ್ಲಿ ಗುಡ್ಡಗಾಡು ಓಟ ಸ್ಪರ್ಧೆ

ನೇತಾಜಿ ಸುಭಾಶ್ ಚಂದ್ರ ಬೋಸ್ ರವರ 125 ನೇ ಜನ್ಮದಿನದ ಅಂಗವಾಗಿ ” ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ “ಕಾರ್ಕಳ ಇವರ ಆಶ್ರಯದಲ್ಲಿ ಹಾಗೂ ಕಾರ್ಕಳದ ಯುವಜನತೆ ಸಹಭಾಗಿತ್ವದಲ್ಲಿ “Republic Day Run” ಎಂಬ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ.

26.01.2021 ನೇ ಮಂಗಳವಾರ ಬೆಳಗ್ಗೆ 6.00 ರ ನಂತರ ಈ ಸ್ಪರ್ಧೆಯು ಪ್ರಾರಂಭವಾಗಲಿದೆ. 1Km, 14Km, 7Km ಹಾಗು 4Km ಎಂಬ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಯುವಕರಲ್ಲಿ ಬಹುಮುಖ ಪ್ರತಿಭೆಗಳು ಹೇರಳವಾಗಿದ್ದು, ಇಂಥಾ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕಾರ್ಯವೇ ಈ ಓಟಕ್ಕೆ ಸ್ಫೂರ್ತಿ ಎಂದು RPCA,ಕಾರ್ಕಳ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಪ್ರಭು ರವರು ತಿಳಿಸಿದ್ದಾರೆ.

republic day Run

ಇನ್ನು ಈ ಸ್ಪರ್ಧೆಯಲ್ಲಿ ಯುವಕರಷ್ಟೇ ಅಲ್ಲದೆ ಹಿರಿಯರಿಗೂ ಅವಕಾಶವಿದೆ. ಆದ್ರೆ ಇದಕ್ಕೆ ವಿಶೇಷ ಅನುಮತಿಯ ಅವಶ್ಯಕತೆ ಇದೆ.

ವಿಶೇಷ ಅನುಮತಿ ಪಡೆದು 50 ವರ್ಷ ಮೇಲ್ಪಟ್ಟ ಹಿರಿಯರು ಸಹ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಸ್ಪರ್ಧೆಯ ವಿಜೇತರಿಗೆ ಆಕರ್ಷಿತ ಬಹುಮಾನವಿರಲಿದ್ದು, ನೋಂದಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9844505610ಗೆ ಕರೆ ಮಾಡಬಹುದು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd