UP ಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮನವಿ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್..!
ನವದೆಹಲಿ: ಉತ್ತರಪ್ರದೇಶದಲ್ಲಿ ದಿನೇ ದಿನೇ ಅತ್ಯಾಚಾರ, ಮಹಿಳೆಯರಿಂದ ಹಿಡಿದು ಪುಟ್ಟ ಕಂದಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ, ಅಪರಾಧಗಳಂತಹ ಪ್ರಕರಣಗಳು ಹೆಚ್ಚಾಗ್ತಲೇ ಇವೆ. ಹೀಗಾಗಿ ಹೆಚ್ಚುತ್ತಿರುವ ಅಪರಾಧಗಳು ಹಾಗೂ ಸಂವಿಧಾನ ಬದ್ಧ ಆಡಳಿತದ ವೈಫಲ್ಯದ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದ್ರೆ ಇಂತಹ ಅರ್ಜಿಯನ್ನ ಭಾರತದ ಸರ್ವೋಚ್ಛ ನ್ಯಾಯಾಲಯವು ತಿರಸ್ಕರಿಸಿದೆ.
ಇದೇ ವೇಳೆ ನ್ಯಾಯಾಲಯದ ವೆಚ್ಚವನ್ನು ನಿಮ್ಮ ಮೇಲೆ ಹೇರಲಾಗುವುದು ಎಂದು ಸುಪ್ರೀಂ ಕೋರ್ಟ್ ದೂರುದಾರ-ವಕೀಲರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಇತರ ರಾಜ್ಯಗಳ ಅಪರಾಧ ದಾಖಲೆಗಳ ಬಗ್ಗೆ ಸಂಶೋಧನೆ ನಡೆಸಿದ್ದೀರಾ ಎಂದು ಪ್ರಶ್ನಿಸಿದೆ. ಈ ಪ್ರತಿಪಾದನೆಗೆ ನೀವು ಯಾವುದೇ ರೀತಿಯ ಸಂಶೋಧನೆ ನಡೆಸಿಲ್ಲ ಎಂದು ದೂರುದಾರ ಹಾಗೂ ವಕೀಲ ಸಿ.ಆರ್. ಜಯ ಸುಕಿನ್ ಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ , ವಿ. ರಾಮಸುಬ್ರಹ್ಮಣೀಯನ್ ಅವರಿದ್ದ ನ್ಯಾಯಪೀಠ, ನಿಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿರುವುದು ಹೇಗೆ ಎಂದು ಪ್ರಶ್ನಿಸಿದೆ.
ಚೀನಾ ಅಧ್ಯಕ್ಷ ‘ಜಿನ್ ಪಿಂಗ್’ ದೇಹದಲ್ಲಿ ‘ಪ್ರಜಾಸತ್ತಾತ್ಮಕ ಎಲುಬಿಲ್ಲ’: ಜೋ ಬೈಡನ್..!
ಇದಕ್ಕೆ ಉತ್ತರಿಸಿದ್ದ ದೂರುದಾರ ವಕೀಲರಾದ ಸುಕಿನ್ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ದತ್ತಾಂಶವನ್ನು ಉಲ್ಲೇಖಿಸಿ, ತಾನು ಸಂಶೋಧನೆ ನಡೆಸಿದ್ದೇನೆ. ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದರು.
ಆದ್ರೆ ಇದರ ವಿರುದ್ಧವಾಗಿ ಪ್ರಶ್ನಿಸಿದ ನ್ಯಾಯಾಲಯವು , ಎಷ್ಟು ರಾಜ್ಯಗಳ ಕ್ರೈಮ್ ರೆಕಾರ್ಡ್ ಅನ್ನು ನೀವು ಅಧ್ಯಯನ ನಡೆಸಿದ್ದೀರಿ. ಇತರ ರಾಜ್ಯಗಳ ಕ್ರೈಮ್ ರೆಕಾರ್ಡ್ ಅನ್ನು ನೀವು ಅಧ್ಯಯನ ನಡೆಸಿದ್ದೀರಾ. ಇತರ ರಾಜ್ಯಗಳ ಕ್ರೈಮ್ ರೆಕಾರ್ಡ್ ಬಗ್ಗೆ ನಿಮ್ಮ ಅಧ್ಯಯನ ಏನು ಹೇಳುತ್ತದೆ. ಇದನ್ನು ನೀವು ಯಾವ ಆಧಾರದ ಮೇಲೆ ಹೇಳುತ್ತೀರಿ ಎಂಬುದನ್ನು ತೋರಿಸಿ ಎಂದು ನಿರ್ದೇಶಿಸಿದೆ. ಜೊತೆಗೆ ಇನ್ನಷ್ಟು ವಾದ ಮಂಡಿಸಿದರೆ, ನ್ಯಾಯಾಲಯದ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ ಎಂದು ಸುಕಿನ್ ಅವರಿಗೆ ಎಚ್ಚರಿಕೆ ನೀಡಿ, ಅರ್ಜಿ ತಿರಸ್ಕರಿಸಿದೆ.
ಬದುಕುವ ಭರವಸೆ ಕಳೆದುಕೊಂಡಿದ್ದೆವು. ಅಷ್ಟರಲ್ಲಿ ಫೋನ್ ನೆಟ್ವರ್ಕ್ ಭರವಸೆ ಮೂಡಿಸಿತು – ಹಿಮನದಿ ಸ್ಫೋಟದಲ್ಲಿ ಬದುಕುಳಿದವರ ಮಾತುಗಳು
ನಾನೊಬ್ಬ ಹಿಂದುಸ್ತಾನಿ ಮುಸ್ಲಿಂ ಅನ್ನೋದಕ್ಕೆ ನನಗೆ ಹೆಮ್ಮೆ : ಗುಲಾಂ ನಬಿ ಆಜಾದ್
ಕಣ್ಣೀರಾಕುತ್ತಾ ಗುಲಾಂ ನಬಿ ಆಜಾದ್ ಗೆ ಸಲ್ಯೂಟ್ ಮಾಡಿದ ಮೋದಿ
ಭಾರತೀಯ ಸೇನೆಯು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ 89 ಆ್ಯಪ್ ಗಳಿಗೆ ವಿಧಿಸಿರುವ ಬ್ಯಾನ್ ಯಶಸ್ವಿ
ಮುತ್ತಿನ ನಗರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಸಲಾರ್’ ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








