ಉಡುಪಿ : ಸಮುದ್ರದಲ್ಲಿ ಸಿಲುಕಿಕೊಂಡಿದ್ದ 9 ಮಂದಿಯ ರಕ್ಷಣೆ

1 min read
Udupi

ಉಡುಪಿ : ಸಮುದ್ರದಲ್ಲಿ ಸಿಲುಕಿಕೊಂಡಿದ್ದ 9 ಮಂದಿಯ ರಕ್ಷಣೆ

ಉಡುಪಿ : ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ 40 ಗಂಟೆಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡು ದಡ ಸೇರಲಾಗದೇ ಪರದಾಡುತ್ತಿದ್ದ ಒಂಭತ್ತು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಕಾಪು ದೀಪಸ್ತಂಭದಿಂದ 13 ನಾಟಿಕಲ್ ಮೈಲಿ ದೂರದಲ್ಲಿ ಕೋರಮಂಡಲ ಟಗ್ ಬೋಟ್ ನಲ್ಲಿ ಎಂಆರ್‍ಪಿಎಲ್ ನ 9 ಮಂದಿ ಸಿಲುಕಿಕೊಂಡಿದ್ದರು.

ಅಲ್ಲದೆ ವಿಡಿಯೋ ಮಾಡಿ ರಕ್ಷಣೆ ಮಾಡುವಂತೆ ಅಂಗಲಾಚಿದ್ದರು. ಇದೀಗ ಹೆಲಿಕಾಪ್ಟರ್ ಹಾಗೂ ಕೋಸ್ಟ್ ಗಾರ್ಡ್ ಸ್ಪೀಡ್ ಬೋಟ್ ಬಳಸಿ 9 ಮಂದಿಯ ಪ್ರಾಣ ರಕ್ಷಿಸಲಾಗಿದೆ.

Udupi

ಮುಲ್ಲಾ ಖಾನ್, ಗೌರವ್ ಕುಮಾರ್, ಶಂತನು, ಅಹಮ್ಮದ್ ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀನಾರಾಯಣ ಎಂಬುವರನ್ನು ರಕ್ಷಣೆ ಮಾಡಲಾಗಿದೆ.

ಈ 9 ಮಂದಿಯಲ್ಲಿ ಐವರನ್ನು ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು, ಬಳಿಕ ಎನ್‍ಎಂಪಿಟಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd