ಮೀಸಲಾತಿ ಮತ್ತು ಸಿಎಂ ರಕ್ಷಣೆಗೆ ನಿಮ್ಮ ಮಠಗಳಿಲ್ಲ : ಮುತಾಲಿಕ್ Muthalik saaksha tv
ಬಾಗಲಕೋಟೆ : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ನಿಟ್ಟಿನಲ್ಲಿ ಸ್ವಾಮೀಜಿಗಳು ಮಠ ಬಿಟ್ಟು ಹೊರಗಡೆ ಬರಬೇಕು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿಕೊಂಡಿದ್ದಾರೆ
ಮತಾಂತರ ನಿಷೇಧ ಕಾನೂನು ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಮಠಗಳನ್ನು ಬಿಟ್ಟು ಹೊರಗಡೆ ಬರಬೇಕು. ಮೀಸಲಾತಿ ಮತ್ತು ಸಿಎಂ ರಕ್ಷಣೆಗೆ ನಿಮ್ಮ ಮಠಗಳಿಲ್ಲ. ಮಠಗಳು ಸಮಾಜದ ರಕ್ಷಣೆಗೋಸ್ಕರ ಹೊರಬರಬೇಕು ಎಂದು ಕಿವಿ ಮಾತು ಹೇಳಿದರು.
ನಾಳೆಯಿಂದ ಬೆಳಗಾವಿಯಲ್ಲಿ ಅಧಿವೇಶ ಆರಂಭವಾಗಲಿದೆ. ಇದೇ ಅಧಿವೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು. ಇಲ್ಲದಿದ್ದರೇ ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧದ ಬಗ್ಗೆ ಮಾತನಾಡಿ, ಕಾಂಗ್ರೆಸ್ನವರಿಗೆ ದೇಶ, ಧರ್ಮದ ಬಗ್ಗೆ ಕಾಳಜಿ ಇಲ್ಲ. ಸೋನಿಯಾ ಗಾಂಧಿ ಖುಷಿ ಮಾಡೋಕೆ ಹೀಗೆ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.









