ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಪತಿ ರೇವಣ್ಣ (HD Revanna) ಅರೆಸ್ಟ್ ಆಗುತ್ತಿದ್ದಂತೆ ಸದ್ಯ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೂ ಸಂಕಷ್ಟ ಎದುರಾಗುತ್ತಿದೆ ಎನ್ನಲಾಗಿದೆ.
ಭವಾನಿ ರೇವಣ್ಣ ಕರೆಯುತ್ತಿದ್ದಾರೆ ಎಂದು ಹೇಳಿ ತನ್ನ ತಾಯಿಯನ್ನು ಸತೀಶ್ ಬಾಬು ಕರೆದೊಯ್ದಿದ್ದಾರೆ ಎಂದು ಸಂತ್ರಸ್ತ ಮಹಿಳೆಯ ಪುತ್ರ ದೂರು ನೀಡಿದ್ದರು. ಹೀಗಾಗಿ ಈಗಾಗಲೇ ಪ್ರಕರಣದಲ್ಲಿ ಸತೀಶ್ ಬಾಬು ಮತ್ತು ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಹೇಳಿಕೆ ದಾಖಲು ಮಾಡಿದ ಕೂಡಲೇ ತುರ್ತು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಭವಾನಿಗೆ ರೇವಣ್ಣಗೆ ನೋಟಿಸ್ ನೀಡಬಹುದು. ಒಂದು ವೇಳೆ ಸಂತ್ರಸ್ತ ಮಹಿಳೆ ವ್ಯತಿರಿಕ್ತ ಹೇಳಿಕೆಯನ್ನು ನೀಡಿದರೆ, ಪ್ರಕರಣದಲ್ಲಿ ಭವಾನಿ ರೇವಣ್ಣ ಕೂಡ ಆರೋಪಿಯಾಗುವ ಸಾಧ್ಯತೆ ಇದೆ.